ADVERTISEMENT

‌ಉತ್ತರ ಕನ್ನಡ: ಶಿರಸಿಯ ವಿಶಿಷ್ಟ ಜನಪದೀಯ ಆಚರಣೆ - ರೌದ್ರ ರಮಣೀಯ ಬೇಡರ ವೇಷ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 14:40 IST
Last Updated 5 ಮಾರ್ಚ್ 2023, 14:40 IST

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹೋಳಿ ಹುಣ್ಣಿಮೆ ಮುನ್ನಾದಿನಗಳಲ್ಲಿ ಬೇಡರವೇಷ ಎಂಬ ವಿಶಿಷ್ಟ ಜನಪದೀಯ ಆಚರಣೆ ನಡೆಯುತ್ತದೆ. ಶಿರಸಿ ಮಾರಿಕಾಂಬ ಜಾತ್ರೆ ಇಲ್ಲದ ವರ್ಷ ಅಂದರೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಬೇಡರ ಕುಣಿತವನ್ನ ಕಾಣಲು ಬೇರೆ ಬೇರೆ ಜಿಲ್ಲೆ, ಹೊರ ರಾಜ್ಯಗಳಿಂದಲೂ ಜನ‌ ಬರುತ್ತಾರೆ. ಬೇಡರ ವೇಷಧಾರಿಗಳ ರೌದ್ರತೆ, ಅವರು ಹಾಕುವ ಕೇಕೆ, ತಮಟೆಯ ಸದ್ದು ಜನರನ್ನು ಕೂಡಾ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.