ADVERTISEMENT

ಡಾ. ಹನೂರರಿಗೆ ಬಿ.ಎಚ್.ಶ್ರೀ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 11:11 IST
Last Updated 13 ಫೆಬ್ರುವರಿ 2020, 11:11 IST
ಡಾ. ಕೃಷ್ಣಮೂರ್ತಿ ಹನೂರ
ಡಾ. ಕೃಷ್ಣಮೂರ್ತಿ ಹನೂರ   

ಶಿರಸಿ: ಹಿರಿಯ ಸಾಹಿತಿ ಬಿ.ಎಚ್.ಶ್ರೀಧರರ ಸ್ಮರಣೆಯಲ್ಲಿ ನೀಡುವ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿಯನ್ನು ಜಾನಪದ ತಜ್ಞ, ಕಥೆಗಾರ ಡಾ. ಕೃಷ್ಣಮೂರ್ತಿ ಹನೂರ ಅವರಿಗೆ ಪ್ರಕಟಿಸಲಾಗಿದೆ.

ಶ್ರೀಧರರ ಜನ್ಮದಿನವಾದ ಏ.24ರಂದು ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ, ನಗದು ಹಾಗೂ ನೆನಪಿನ ಕಾಣಿಕೆಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತ್ತಕೋತ್ತರ ಕೇಂದ್ರದಲ್ಲಿ (ಚಾಮರಾಜ ನಗರ) ಸಂದರ್ಶಕ ಪ್ರಾಧ್ಯಾಪಕರಾಗಿರುವ ಹನೂರ ಅವರು, 'ಕೇರಿಗೆ ಬಂದ ಹೋರಿ', 'ಕತ್ತಲಲ್ಲಿ ಕಂಡ ಮುಖ', 'ಕಳೆದ ಮಂಗಳವಾರ ಮುಸ್ಸಂಜೆ' ಕಥಾ ಸಂಕಲನ ರಚಿಸಿದ್ದಾರೆ. ಅವರ 'ಅಜ್ಞಾತನೊಬ್ಬನ ಆತ್ಮ ಚರಿತ್ರೆ’ ಕಾದಂಬರಿ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಜಾನಪದ ಕ್ಷೇತ್ರ ಕಾರ್ಯದ ಅನುಭವ ಕಥನ 'ಕಾಲು ದಾರಿಯ ಕಥನಗಳು' ಕೃತಿಯನ್ನು ಪರಿಗಣಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ. ಟಿ.ನಾರಾಯಣ ಭಟ್ಟ ಮತ್ತು ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT