ADVERTISEMENT

ಬಾಂಬ್ ಸ್ಫೋಟ: ರಾಜಕೀಯ ಪಕ್ಷಗಳು ಬಾಯ್ಮುಚ್ಚಿಕೊಂಡಿರಲಿ- ಪ್ರಮೋದ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 7:11 IST
Last Updated 4 ಮಾರ್ಚ್ 2024, 7:11 IST
<div class="paragraphs"><p>ಪ್ರಮೋದ ಮುತಾಲಿಕ್</p></div>

ಪ್ರಮೋದ ಮುತಾಲಿಕ್

   

ಕಾರವಾರ: ಬೆಂಗಳೂರು ಬಾಂಬ್ ಸ್ಪೋಟ ಪೂರ್ವಯೋಜಿತ ಕೃತ್ಯ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಬಿಜೆಪಿ, ಕಾಂಗ್ರೆಸ್ ನಾಯಕರು ಬಾಯಿ ಮುಚ್ಚಿಕೊಂಡಿರಲಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ಇಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ಹೇಳಿಕೆಗಳು ತನಿಖೆಯ ದಾರಿ ತಪ್ಪಿಸಲಿದೆ. ಬಿಜೆಪಿ ಅವಧಿಯಲ್ಲಿಯೂ ಸ್ಫೋಟ ನಡೆದಿತ್ತು. ಕಾಂಗ್ರೆಸ್ ಅವಧಿಯಲ್ಲೂ ನಡೆದಿದೆ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯದ ಪರಿಣಾಮವೇ ಪದೇ ಪದೇ ಬಾಂಬ್ ಸ್ಫೋಟಕ್ಕೆ ಕಾರಣ ಎಂದರು.

ADVERTISEMENT

ರಾಜ್ಯ ಸರ್ಕಾರದ ಬದಲು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು. ಪೊಲೀಸರ ಮೇಲೆ ಆಡಳಿತ ಪಕ್ಷ ಒತ್ತಡ ತರುತ್ತದೆ. ಅದರಿಂದ ತನಿಖೆಯ ದಾರಿ ತಪ್ಪುತ್ತದೆ ಎಂದರು.

ಪಾಕಿಸ್ತಾನ ಪರ ಘೋಷಣೆ ಕೂಗುವವರು ದೇಶದ ಪಾಲಿಗೆ ಕ್ಯಾನ್ಸರ್ ವೈರಸ್ ಇದ್ದಂತೆ. ಮೊದಲು ನಾಸಿರ್ ಹುಸೇನ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಭಟ್ಕಳಕ್ಕೆ ಪಾಕಿಸ್ತಾನದ ನಂಟಿದೆ ಎಂದು ಜಗನ್ನಾಥ ಶೆಟ್ಟಿ ಆಯೋಗ ವರದಿ ನೀಡಿತ್ತು. ವರದಿಯನ್ನು ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಒಪ್ಪಲಿಲ್ಲ. ಬಿಜೆಪಿ, ಕಾಂಗ್ರೆಸ್'ಗೆ ಹೆಚ್ಚು ವ್ಯತ್ಯಾಸವಿಲ್ಲ ಎಂದರು.

ಜಾತಿ ಗಣತಿ ವರದಿಗೆ ವಿರೋಧವಿದೆ. ದೇಶದಲ್ಲಿ ಒಟ್ಟಾಗಿ ಸಾಗಬೇಕಿದೆ. ರಾಜಕೀಯ ಪಕ್ಷಗಳು ಸಮುದಾಯಗಳನ್ನು ಒಡೆದು ಆಳಲು ಈ ವರದಿ ಸಿದ್ದಪಡಿಸಿವೆ. ಇದೊಂದು ಅವೈಜ್ಞಾನಿಕ ವರದಿ ಎಂದರು.

ದೇಶಕ್ಕೆ ಒಳಿತಾಗಬೇಕೆಂದರೆ ರಾಜ್ಯದ ಕೆಲ ಬಿಜೆಪಿ ನಾಯಕರು ಸ್ವಯಂ ನಿವೃತ್ತಿ ತೆಗೆದುಕೊಂಡು ಬೇರೆಯವರಿಗೆ ಮಾದರಿಯಾಗಲಿ. ಆದರೆ ನಿವೃತ್ತಿ ಆಗಬೇಕಾದವರ ಹೆಸರು ಬಹಿರಂಗವಾಗಿ ಹೇಳುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.