ADVERTISEMENT

ಉತ್ತರ ಕನ್ನಡ: ನದಿ ಬಿಟ್ಟು ರಸ್ತೆಯಲ್ಲಿ ವಾಕಿಂಗ್ ಬಂದ ಮೊಸಳೆ!

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 18:08 IST
Last Updated 1 ಜುಲೈ 2021, 18:08 IST
ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ದೊಡ್ಡ ಗಾತ್ರದ ಮೊಸಳೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡಿತು
ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ದೊಡ್ಡ ಗಾತ್ರದ ಮೊಸಳೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡಿತು   

ದಾಂಡೇಲಿ (ಉತ್ತರ ಕನ್ನಡ): ಇಲ್ಲಿನ ಕಾಳಿ ನದಿಯ ಪಕ್ಕದಲ್ಲಿ ಇರುವ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಮೊಸಳೆ ಪ್ರತ್ಯಕ್ಷವಾಯಿತು. ಸುಮಾರು ಅರ್ಧಗಂಟೆ ಗ್ರಾಮದೊಳಗಿನ ರಸ್ತೆಯಲ್ಲಿ ಸಂಚರಿಸಿ ಜನರಲ್ಲಿ ಆಂತಕ ಸೃಷ್ಟಿಸಿತ್ತು.

ಕಾಳಿ ನದಿಯಿಂದ ಹೊರಬಂದ ಮೊಸಳೆ ಜನವಸತಿ ಪ್ರದೇಶಗಳಲ್ಲಿಸಂಚರಿಸಿತು. ಯಾವುದೇ ಸಾಕು ಪ್ರಾಣಿಗಳಿಗೆ ತೊಂದರೆ ಮಾಡಲಿಲ್ಲ. ಆದರೆ, ಯಾರದ್ದಾದರೂ ಮನೆಯೊಳಗೆ ಮೊಸಳೆ ಹೋದರೆ ಹೇಗೆ? ಎನ್ನುವ ಆತಂಕದಿಂದ ಜನರು ಭಯಭೀತರಾಗಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯ ಮೊಸಳೆಯನ್ನು ಮತ್ತೆ ನದಿಗೆ ಸೇರಿಸಿದರು.

ಗ್ರಾಮದ ಪಕ್ಕದಲ್ಲಿ ಕಾಳಿ ನದಿಯಿದ್ದು, ಅಣತಿ ದೂರದಲ್ಲಿ ಮೊಸಳೆ ಪಾರ್ಕ್ ಇದೆ. ಅಲ್ಲಿ ನೂರಾರು ಮೊಸಳೆಗಳಿವೆ. ಆದರೆ, ಜನವಸತಿ ಪ್ರದೇಶಕ್ಕೆ ಆಗಾಗ ರಾತ್ರಿ ವೇಳೆಯಲ್ಲಿ ಮಾತ್ರವೇ ಬರುತ್ತಿದ್ದ ಮೊಸಳೆಗಳು ಬೆಳಗಿನ ಹೊತ್ತಿನಲ್ಲಿ ಬಂದು ಜನರಲ್ಲಿ ಅಚ್ಚರಿ ಉಂಟುಮಾಡಿವೆ. ಬೆಳಿಗ್ಗೆ ವಾಕಿಂಗ್ ಬಂದ ಜನರು ಮೊಸಳೆಯನ್ನು ಕಂಡು ಗಾಬರಿಗೊಂಡರೂ, ಹಲವರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.