ಸಿದ್ದಾಪುರ: ತಾಲ್ಲೂಕಿನ ಭಾನ್ಕುಳಿಯ ರಾಮದೇವಮಠದಲ್ಲಿ ನಡೆಯುತ್ತಿರುವ ಶಂಕರ ಪಂಚಮಿ ಉತ್ಸವದಲ್ಲಿ ಕುಂಭಾಶಿಯ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನದವರು ಭಾನುವಾರ ರಾತ್ರಿ ಪ್ರದರ್ಶಿಸಿದ ‘ಧರ್ಮಾಂಗದ ದಿಗ್ವಿಜಯ’ ಯಕ್ಷಗಾನ ಪ್ರೇಕ್ಷಕರ ಗಮನ ಸೆಳೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹಿಲ್ಲೂರ, ಮೃದಂಗವಾದಕರಾಗಿ ಗಜಾನನ ಭಂಡಾರಿ ಬೋಳಗೆರೆ, ಚಂಡೆವಾದಕರಾಗಿ ಲಕ್ಷ್ಮೀನಾರಾಯಣ ಸಂಪ ಹಾಗೂ ಶ್ರೀರಮಣ ಮೂರೂರು ಸಹಕರಿಸಿದರು. ಭರತನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಧರ್ಮಾಂಗದನಾಗಿ ಗಣಪತಿ ಹೆಗಡೆ ತೋಟಿಮನೆ, ಬಲಿಚಕ್ರವರ್ತಿಯಾಗಿ ನಾಗೇಶ ಗೌಡ ಕುಳಿಮನೆ, ನಾರದನಾಗಿ ಅಶೋಕ ಭಟ್ಟ ಸಿದ್ದಾಪುರ, ವಿಷ್ಣುವಾಗಿ ಮಾರುತಿ ನಾಯ್ಕ, ದೂತನಾಗಿ ಹಾಸ್ಯಗಾರ ಚಪ್ಪರಮನೆ ಶ್ರೀಧರ ಹೆಗಡೆ, ನೇಪಥ್ಯದಲ್ಲಿ ಲಕ್ಷ್ಮಣ ನಾಯ್ಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.