(ಐಸ್ಟೋಕ್ ಸಾಂದರ್ಭಿಕ ಚಿತ್ರ)
ಕಾರವಾರ: ಡಿಜಿಟಲ್ ಅರೆಸ್ಟ್ ಮೂಲಕ ದೇಶದ ವಿವಿಧೆಡೆ ₹40.95 ಕೋಟಿ ವಂಚಿಸಿದ್ದ ಬಿಹಾರ ರಾಜ್ಯದ ಪಾಟ್ನಾದ ಹರ್ದೀಪ್ ಸಿಂಗ್ (39) ಎಂಬುವನನ್ನು ಕಾರವಾರ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರದ ವಿಲ್ಸನ್ ಎಂಬುವರಿಗೆ ‘ವಿದೇಶದಿಂದ ಪಾರ್ಸೆಲ್‌ನಲ್ಲಿ ಮಾದಕ ಪದಾರ್ಥ ಸಿಕ್ಕಿದೆ’ ಎಂದು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವಿಡಿಯೊ ಕರೆ ಮಾಡಿ, ಬೆದರಿಸಿ ₹3.80 ಲಕ್ಷ ವಂಚಿಸಿದ್ದಾಗಿ 2024ರ ಅಕ್ಟೋಬರ್ 23 ರಂದು ಪ್ರಕರಣ ದಾಖಲಾಗಿತ್ತು.
‘ಬಂಧಿತ ಹರ್ದೀಪ್‍ನನ್ನು ಬಿಹಾರದಲ್ಲಿ ಪತ್ತೆ ಮಾಡಲಾಯಿತು. ಆತ ಹಲವು ಬ್ಯಾಂಕ್‌ಗಳಲ್ಲಿ 8 ಉಳಿತಾಯ ಮತ್ತು 2 ಚಾಲ್ತಿ ಖಾತೆ ಹೊಂದಿದ್ದ. ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಿದ ಕುರಿತು ಆತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳು, ತಮಿಳುನಾಡು, ಆಂಧ್ರಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.