ಗೋಕರ್ಣ: ಪರಂಪರಾಗತವಾಗಿ ನಡೆದುಕೊಂಡು ಬಂದಂತೆ ರಥಸಪ್ತಮಿಯ ದಿನವಾದ ಮಂಗಳವಾರ ಶ್ರೀಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವರ ಮಹಾರಥವನ್ನು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮಹಾರಥಕ್ಕೆ ವೇ. ಸುಬ್ಯಹ್ಮಣ್ಯ ಪಂಡಿತರು ಪೂಜೆ ಸಲ್ಲಿಸಿದ ನಂತರ ರಥವನ್ನು ಮೂಲ ಸ್ಥಾನದಿಂದ ಎಳೆದು ಹೊರಗೆ ತರಲಾಯಿತು.
ಹಾಲಕ್ಕಿ ಜನಾಂಗ, ಖಾರ್ವಿ ಜನಾಂಗ, ಗಾಬಿತ ಜನಾಂಗ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು. ಇಂದಿನಿಂದ ಮಹಾರಥ ಕಟ್ಟುವ ಕೆಲಸಕ್ಕೆ ಚಾಲನೆ ದೊರೆಯಲಿದೆ. ಈ ವರ್ಷದ ಮಹಾಶಿವರಾತ್ರಿಯ ರಥೋತ್ಸವವು ಫೆ.28ರಂದು ನಡೆಯಲಿದೆ. ಮೇಲುಸ್ತುವಾರಿ ಸಮಿತಿಯ ಸದಸ್ಯರು, ದೇವಸ್ಥಾನದ ಸಿಬ್ಬಂದಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.