ADVERTISEMENT

ಹಳಿಯಾಳ | ಕಾಳಿ ನೀರಾವರಿ ಯೋಜನೆಗಾಗಿ ಪಾದಯಾತ್ರೆ: ನಾಗೇಂದ್ರ ಜಿವೋಜಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 7:10 IST
Last Updated 19 ಫೆಬ್ರುವರಿ 2026, 7:10 IST
<div class="paragraphs"><p>&nbsp;ಕಾಳಿ ನದಿ ಸೇತುವೆ&nbsp;</p></div>

 ಕಾಳಿ ನದಿ ಸೇತುವೆ 

   

ಹಳಿಯಾಳ: ಕಾಳಿ ನದಿಯಿಂದ ಕೆರೆ ಹಾಗೂ ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿಲ್ಲ. ರೈತರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಿ ಫೆ.27 ರಂದು ತಾಲ್ಲೂಕಿನಾದ್ಯಂತ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದು ಕಬ್ಬು ಬೆಳೆಗಾರರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು.

ಮಂಗಳವಾರ ಇಲ್ಲಿನ ಮರಾಠಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2017ರಲ್ಲಿ ₹784 ಕೋಟಿ ವೆಚ್ಚದಿಂದ ನಿರ್ಮಾಣ ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಅಡಿಗಲ್ಲು ಹಾಕಿ ಪ್ರಾರಂಭಿಸಲಾಯಿತು. ಯೋಜನೆಯಿಂದ ರೈತರ ಕೃಷಿಗೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ತಾಲ್ಲೂಕಿನ ರೈತರು ಕಾಯುತ್ತಿದ್ದರೂ, ಯೋಜನೆ ಏಳು ವರ್ಷಗಳ ಹಿಂದೆಯೇ ಜಾರಿಗೆ ಬರಬೇಕಾಗಿದ್ದರೂ ಇದುವರೆಗೂ ಕಾರ್ಯಗತಗೊಂಡಿಲ್ಲ ಎಂದರು.

ADVERTISEMENT

ನೀರಿನ ಕೊರತೆಯಿಂದ ನಿರಾಶೆಗೊಂಡ ರೈತರು ಲಕ್ಷಾಂತರ ವೆಚ್ಚ ಮಾಡಿ ಸಾಲದ ಹೊರೆಯಾಗಿರುತ್ತದೆ. ಯೋಜನೆಗಾಗಿ 2003ರಿಂದ ರೈತರು ಹೋರಾಟ ನಡೆಸಿದ್ದು, ಅನೇಕ ಬಾರಿ ಚುನಾವಣೆಗೂ ಇದು ಪ್ರಮುಖ ವಿಷಯವಾಗಿತ್ತು. ಮಂಜೂರಾತಿ ಪಡೆಯಲು 15 ವರ್ಷಗಳ ಹೋರಾಟ ಸಾಕ್ಷಿಯಾಗಿತ್ತು. ಆದರೆ ಮಂಜೂರಾದ ನಂತರವೂ ಒಂಬತ್ತು ವರ್ಷಗಳಾದರೂ ಯೋಜನೆ ಪೂರ್ಣಗೊಳ್ಳದೇ ಇರುವುದು ವಿಷಾದನೀಯ ಎಂದರು.

‘ಶಾಸಕ ಆರ್‌.ವಿ.ದೇಶಪಾಂಡೆ ಸಹ ಯೋಜನೆ ಪ್ರಾರಂಭವಾಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಾ ಬಂದಿರುತ್ತಾರೆ. ಆದರೇ ಯಾವುದೇ ಯೋಜನೆ ಪೂರ್ಣಗೊಂಡಿಲ್ಲ. ಹಳಿಯಾಳ ಪಟ್ಟಣದಲ್ಲಿ ನೀರು ಬರುವವರೆಗೂ ನಿರಂತರ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಅಶೋಕ ಮೇಟಿ, ಕುಮಾರ ಬೋಬಾಟಿ, ಸಾತುರಿ ಗೋಡಿಮನಿ, ಸುರೇಶ ಶಿವನ್ನವರ ರಾಮದಾಸ ಬೆಳಗಾಂವಕರ, ಮಹೇಶ ಪಾಳೆಕರ, ಪುಂಡ್ಲಿಕ ಗೋಡಿಮನಿ, ನಕುಲ ಕೆಂಚಣ್ಣವರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.