ADVERTISEMENT

ಯಲ್ಲಾಪುರ: ಕೊಡ್ಲಗದ್ದೆಯಲ್ಲಿ ಬಂಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 5:58 IST
Last Updated 12 ಫೆಬ್ರುವರಿ 2025, 5:58 IST
   

ಯಲ್ಲಾಪುರ: ತಾಲ್ಲೂಕಿನ ಗಡಿ ಭಾಗದಲ್ಲಿರುವ ಕೊಡ್ಲಗದ್ದೆ ಗ್ರಾಮದ ಅಡಿಕೆ ತೋಟವೊಂದರಲ್ಲಿ ಬುಧವಾರ ಬೆಳಿಗ್ಗೆ ಬೃಹತ್ ಗಾತ್ರದ ನಾಲ್ಕೈದು ಬಂಡೆಗಳು ಉರುಳಿ ಬಿದ್ದಿವೆ.

ಬಂಡೆ ಉರುಳುವಾಗ ಭಾರಿ ಪ್ರಮಾಣದ ಸದ್ದು ಉಂಟಾಗಿದ್ದು ಸುತ್ತಮುತ್ತಲ ಭಾಗದ ನಿವಾಸಿಗಳಿಗೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಬಂಡೆ ಕುಸಿತದ ಪರಿಣಾಮ ತೋಟಕ್ಕೆ ನೀರು ಹಾಯಿಸುವ ನೀರಾವರಿ ಕಾಲುವೆ ಸಂಪೂರ್ಣ ಮುಚ್ಚಿಹೋಗಿದೆ.

'ಅಂದಾಜು 40 ಅಡಿ ಉದ್ದ, 25 ಅಡಿ ಎತ್ತರದ ಒಂದು ಬಂಡೆ ಸೇರಿದಂತೆ ನಾಲ್ಕಾರು ಬಂಡೆಗಳು ಕುಸಿದಿವೆ. ಬಂಡೆಯ ತುಣುಕುಗಳು 50-60 ಅಡಿ ದೂರ ಹೋಗಿಬಿದ್ದಿವೆ. ಪದರು ಪದರಾಗಿರುವ ಈ ಬಂಡೆಯ ನಡುವೆ ಮಣ್ಣು ಇತ್ತು. ಬಂಡೆ ಸಹಜವಾಗಿ ಕುಸಿದಿದೆ. ಬಂಡೆಗಳು ತೋಟದ ತುಂಬ ಬಿದ್ದಿದ್ದು ಬಂಡೆಯನ್ನು ತೋಡದಿಂದ ಹೊರಹಾಕುವುದು ಕಷ್ಟ. ಸ್ಥಳಕ್ಕೆ ಜೆಸಿಬಿ ಸೇರಿದಂತೆ ವಾಹನ ಹೋಗುವುದಿಲ್ಲ' ಎಂದು ಸ್ಥಳೀಯರಾದ ವಿಶ್ವೇಶ್ವರ ಗಾಂವ್ಕರ ಜೋಗಿಮನೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.