ADVERTISEMENT

ಹಳಿಯಾಳ | ಸಂವಿಧಾನದ ಹಕ್ಕು, ಕರ್ತವ್ಯ ಅರಿಯಿರಿ: ಆರ್‌.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:03 IST
Last Updated 27 ನವೆಂಬರ್ 2025, 5:03 IST
ಹಳಿಯಾಳದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ನಡೆದ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿದರು 
ಹಳಿಯಾಳದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ನಡೆದ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿದರು    

ಹಳಿಯಾಳ: ‘ಸಂವಿಧಾನಬದ್ಧವಾದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಪ್ರತಿಯೊಬ್ಬರು ಸಾಗಿರಿ’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು.

ಇಲ್ಲಿನ ತಹಶೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತಿತರ ಇಲಾಖೆ ವತಿಯಿಂದ ಬುಧವಾರ  ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸಂವಿಧಾನದ ಪ್ರಮುಖ ಉದ್ದೇಶಗಳನ್ನು ಅರಿತು ದೇಶದ ಪ್ರಜೆಗಳ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ರಕ್ಷಿಸುವ ಹಾಗೂ ಅವರಲ್ಲಿ ಭ್ರಾತೃತ್ವವನ್ನು ಪ್ರೇರೇಪಿಸುವ ಒಂದು ಸಾರ್ವಭೌಮ ಪ್ರಜಾಸತಾತ್ಮಕವಾದ ಸಂವಿಧಾನದ ತತ್ವ ಮತ್ತು ಆಶಯಗಳನ್ನು ಸಕಾರಗೊಳಿಸುವಲ್ಲಿ ಪ್ರತಿಯೊಬ್ಬನು ಸಂವಿಧಾನಬದ್ಧವಾಗಿ ಸಾಗಿರಿ’ ಎಂದರು.

ADVERTISEMENT

ಕೆ.ಪಿ.ಎಸ್‌ ಮುರ್ಕವಾಡ ಸರ್ಕಾರಿ ಪ್ರೌಡ ಶಾಲೆಯ ಮುಖ್ಯಶಿಕ್ಷಕ ದಿನೇಶ ನಾಯಕ ಅವರು, ಸಂವಿಧಾನದ ರಚನೆ ಸಂವಿಧಾನದಲ್ಲಿ ಇರುವ ಹಕ್ಕು ಮತ್ತು ಕರ್ತವ್ಯಕುರಿತು ಉಪನ್ಯಾಸ ನೀಡಿದರು.

ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಾ ಪಾಟೀಲ, ತಹಶೀಲ್ದಾರ್ ಪಿರೋಜಷಾ ಸೋಮನಕಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಿಲಾಸ ರಾಜ ಪ್ರಸನ್ನ, ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಪವಾರ ಇದ್ದರು.

ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪ್ರಸ್ತಾವನೆಯ ಸಾಮೂಹಿಕವಾಗಿ ಪ್ರತಿಜ್ಞೆವಿಧಿ ಬೋಧಿಸಲಾಯಿತು. ರಮೇಶ ಪಾಟೀಲ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.