ADVERTISEMENT

ಕಾರವಾರ: ಮತ್ತೆ ಬಲೆಗೆ ಬಿದ್ದ 'ಕಾರ್ಗಿಲ್' ಮೀನು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 7:57 IST
Last Updated 17 ಸೆಪ್ಟೆಂಬರ್ 2020, 7:57 IST
ಕಾರವಾರದ ಮೀನುಗಾರರ ಬಲೆಗೆ ಬಿದ್ದ ಕಾರ್ಗಿಲ್ ಮೀನು
ಕಾರವಾರದ ಮೀನುಗಾರರ ಬಲೆಗೆ ಬಿದ್ದ ಕಾರ್ಗಿಲ್ ಮೀನು   

ಕಾರವಾರ: ರಾಜ್ಯ ಕರಾವಳಿಯಲ್ಲಿ ಕಳೆದ ವರ್ಷ ಭಾರಿ ಸುದ್ದಿ ಮಾಡಿದ್ದ 'ಕಾರ್ಗಿಲ್ ಮೀನು' (ಟ್ರಿಗ್ಗರ್ ಫಿಶ್) ಈ ವರ್ಷ ಮತ್ತೆ ಮೀನುಗಾರರ ಬಲೆಗೆ ಬಿದ್ದಿವೆ.

ನಗರದ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಆಳಸಮುದ್ರಕ್ಕೆ ತೆರಳಿದ್ದ ದೋಣಿಗಳಿಗೆ ಸುಮಾರು 50 ಬುಟ್ಟಿಗಳಷ್ಟು (ಸುಮಾರು 150 ಕೆ.ಜಿ) ಮೀನು ಸಿಕ್ಕಿವೆ.

'ಓಡನಸ್ ನೈಜರ್' ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಮೀನುಗಳಲ್ಲಿ ಸುಮಾರು 40 ಪ್ರಭೇದಗಳಿವೆ. ಮನುಷ್ಯರಂತೆ ಹಲ್ಲು ಹೊಂದಿರುವ ಈ ಮೀನುಗಳಿಗೆ ಸ್ಥಳೀಯರು 'ಕಾತ್ಲಿ', 'ಕಡಬು' ಎಂದೂ ಕರೆಯುತ್ತಾರೆ.

ADVERTISEMENT

1999ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಈ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಬಲೆಗೆ ಬಿದ್ದವು. ಅಲ್ಲದೇ ಅವುಗಳ ಬಣ್ಣವೂ ಸೈನಿಕರ ಸಮವಸ್ತ್ರದ ಮಾದರಿಯಲ್ಲೇ ಇದೆ. ಹಾಗಾಗಿ ಕಾಕತಾಳೀಯವಾಗಿ 'ಕಾರ್ಗಿಲ್ ಮೀನು' ಎಂದು ಪ್ರಸಿದ್ಧವಾಯಿತು ಎನ್ನುತ್ತಾರೆ ಮೀನುಗಾರರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.