ADVERTISEMENT

ಶಿರಸಿಯಲ್ಲಿ ಗುಡುಗು ಸಹಿತ ಮಳೆ: ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 10:01 IST
Last Updated 14 ಏಪ್ರಿಲ್ 2023, 10:01 IST
ಶಿರಸಿಯಲ್ಲಿ ಮಳೆ ಸುರಿಯಿತು
ಶಿರಸಿಯಲ್ಲಿ ಮಳೆ ಸುರಿಯಿತು   

ಶಿರಸಿ: ಕಳೆದೆರಡು ದಿನಗಳಲ್ಲಿ ಅತಿಯಾದ ಬಿಸಿಲಿನಿಂದ ಕಂಗೆಟ್ಟಿದ್ದ ಶಿರಸಿ ಜನತೆಗೆ ಶುಕ್ರವಾರ ಬಂದ ಮಳೆ ತಂಪೆರೆದಿದೆ.

ಬೆಳಗ್ಗೆಯಿಂದ ಮೋಡಕವಿದ ಸ್ಥಿತಿಯಿದ್ದರೂ ಮಧ್ಯಾಹ್ನದ ಸಮಯ ವಾತಾವರಣದಲ್ಲಿ ಉಷ್ಣಾಂಶ 38 ಡಿಗ್ರಿ ಇತ್ತು. ಇದರಿಂದ ಜನರು ಸೆಖೆ ತಾಳಲಾರದೆ ನೆರಳನ್ನು ಆಶ್ರಯಿಸುತ್ತಿದ್ದರು. ಆದರೆ ಮಧ್ಯಾಹ್ನ 2.40ರಿಂದ ಗುಡುಗು ಸಹಿತ ಹದವಾದ ಮಳೆ ಆರಂಭವಾಗಿದ್ದು, ಭೂಮಿಗೆ ತಂಪೆರೆಯಿತು. ಮೋಡ ಮುಸುಕಿದ ವಾತಾವರಣ ಮುಂದುವರೆದಿದ್ದು, ಮಳೆ ಜೋರಾಗುವ ಲಕ್ಷಣಗಳಿವೆ.

ಬುಧವಾರ ಹಾಗೂ ಗುರುವಾರ ಶಿರಸಿ ನಗರದಲ್ಲಿ ಉಷ್ಣಾಂಶ 39-40 ಡಿಗ್ರಿ ದಾಖಲಾಗಿದ್ದು, ಜನರು ಬಿಸಿಲ ತಾಪದಿಂದ ಕಂಗಾಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT