ADVERTISEMENT

ಉತ್ತರ ಕನ್ನಡ: ಜಿಲ್ಲೆಯಾದ್ಯಂತ ಕ್ಷೀಣಿಸಿದ ಮಳೆ, ನಿಟ್ಟುಸಿರು ಬಿಟ್ಟ ಜನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 6:38 IST
Last Updated 17 ಜುಲೈ 2022, 6:38 IST
ಮುಂಡಗೋಡ ತಾಲ್ಲೂಕಿನ ಕಾವಲಕೊಪ್ಪದಲ್ಲಿ ಮನೆಯೊಂದಕ್ಕೆ ಹಾನಿಯಾಗಿರುವುದು
ಮುಂಡಗೋಡ ತಾಲ್ಲೂಕಿನ ಕಾವಲಕೊಪ್ಪದಲ್ಲಿ ಮನೆಯೊಂದಕ್ಕೆ ಹಾನಿಯಾಗಿರುವುದು   

ಕಾರವಾರ: ಜಿಲ್ಲೆಯಾದ್ಯಂತ ಶನಿವಾರ ದಿನವಡೀ ಅಬ್ಬರಿಸಿದ್ದ ಮಳೆಯು, ಭಾನುವಾರ ಕ್ಷೀಣಿಸಿದೆ. ಹಳ್ಳಗಳು ಉಕ್ಕೇರಿದ್ದ ಹೊನ್ನಾವರದ ಗುಂಡಬಾಳಾ, ಸಾಲ್ಕೋಡು ಸುತ್ತಮುತ್ತ ನೆರೆ ಇಳಿದಿದೆ.

ಹೊನ್ನಾವರ ತಾಲ್ಲೂಕಿನಲ್ಲಿ 10 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ ಆಶ್ರಯ ಪಡೆದಿದ್ದ ಜನರು ತಮ್ಮ ಮನೆಗಳಿಗೆ ಹೋಗಿದ್ದಾರೆ.

ಮುಂಡಗೋಡ ತಾಲ್ಲೂಕಿನಲ್ಲಿ ಭಾನುವಾರ ಬೆಳಗಿನವರೆಗೂ ರಭಸದ ಮಳೆಯಾಗಿದೆ. ಸದ್ಯ ಬಿಡುವು ನೀಡುತ್ತ ಮಳೆ ಮುಂದುವರಿದಿದೆ. ಕಾವಲಕೊಪ್ಪ ಹಾಗೂ ತುಂಬರಗಿ ಗ್ರಾಮಗಳಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಸತತ ಮಳೆಯಿಂದ ಗೋವಿನಜೋಳ ಬೆಳೆ ಹಾನಿಯಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಾರವಾರ, ಶಿರಸಿ, ಯಲ್ಲಾಪುರದಲ್ಲಿ ಮಳೆ ಕಡಿಮೆ ಆಗಿದೆ. ಜೊಯಿಡಾದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.