
ಪ್ರಜಾವಾಣಿ ವಾರ್ತೆಕಾರವಾರ: ತಾಲ್ಲೂಕಿನ ಅಮದಳ್ಳಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಹೊತ್ತಿದ ಬೆಂಕಿಯಿಂದ ಎರಡು ಕಾರು, ಒಂದು ಆಟೊ ಸುಟ್ಟು ಕರಕಲಾದ ಘಟನೆ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.
ಸುಫ್ರೀನ್ ಫರ್ನಾಂಡಿಸ್ ಹಾಗೂ ಥಾಮಸ್ ಫರ್ನಾಂಡಿಸ್ ಎಂಬುವವರಿಗೆ ಸೇರಿದ ವಾಹನಗಳು ನಾಶವಾಗಿವೆ.
'ಆಟೋದಲ್ಲಿ ಇದ್ದ ಎಲ್‌ಪಿಜಿ ಕಿಟ್‌ನಲ್ಲಿ ಸೋರಿಕೆ ಸಂಭವಿಸಿ, ಹೊತ್ತಿಕೊಂಡ ಬೆಂಕಿಯಿಂದ ದುರ್ಘಟನೆ ಸಂಭವಿಸಿರಬಹುದು' ಎಂದು ಗ್ರಾಮೀಣ ಠಾಣೆ ಪೊಲೀಸರು ಶಂಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.