ADVERTISEMENT

ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಕೈದಿಗಳ ಗಲಾಟೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 19:02 IST
Last Updated 10 ಡಿಸೆಂಬರ್ 2025, 19:02 IST
<div class="paragraphs"><p>ಕಾರವಾರ ಜಿಲ್ಲಾ ಕಾರಾಗೃಹ</p></div>

ಕಾರವಾರ ಜಿಲ್ಲಾ ಕಾರಾಗೃಹ

   

ಕಾರವಾರ: ಮಾದಕ ವಸ್ತುಗಳಿಗೆ ಬೇಡಿಕೆ ಇಟ್ಟು ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ರಾತ್ರಿ ಐವರು ಕೈದಿಗಳು ಗಲಾಟೆ ಮಾಡಿದ್ದು, ಬ್ಯಾರಕ್‌ನಲ್ಲಿದ್ದ ಟಿ.ವಿ ಪುಡಿಗಟ್ಟಿದ್ದಾರೆ.

‘ಮಂಗಳೂರು ಕಾರಾಗೃಹದಿಂದ ಸ್ಥಳಾಂತರಿಸಲಾದ ಕೈದಿಗಳಾದ ಮಹಮ್ಮದ್ ನೌಶಾದ್, ಅಬ್ದುಲ್ ರೌಫ್, ಅಬ್ದುಲ ಕಬೀರ, ಜಲಾಲ್ ಮತ್ತು ಎಂ.ಡಿ.ನೌಫಾಲ್ ಮಧ್ಯೆ ವಾಗ್ವಾದ ನಡೆದಿದೆ. ಮೂವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದ್ದಾರೆ.

ADVERTISEMENT

‘ಪದೇ ಪದೇ ಗಲಾಟೆ ಮಾಡುತ್ತಿರುವ ಕೈದಿಗಳನ್ನು ಬೇರೆಡೆ ಸ್ಥಳಾಂತರಿಸಲು ಕಾರಾಗೃಹ ಇಲಾಖೆಯ ಅಧಿಕಾರಿಗಳನ್ನು ಕೋರಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.