ADVERTISEMENT

ಕಾರವಾರ | ಸಂಭ್ರಮದ ಕ್ಷಣ: ಹೆಲಿಕಾಪ್ಟರ್‌ನಲ್ಲಿ ಕಿವುಡ, ಮೂಕ ಮಕ್ಕಳ ಹಾರಾಟ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 8:16 IST
Last Updated 24 ಡಿಸೆಂಬರ್ 2025, 8:16 IST
   

ಕಾರವಾರ: ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯು ತಂಬಿ ಏವಿಯೇಶನ್ ಸಂಸ್ಥೆಯೊಂದಿಗೆ ಆರಂಭಿಸಿರುವ ಹೆಲಿಕಾಪ್ಟರ್ ರೈಡ್‌ಗೆ ಬುಧವಾರ ಚಾಲನೆ ದೊರೆಯಿತು.

ಇಲ್ಲಿನ ಲಂಡನ್ ಸೇತುವೆ ಸಮೀಪದ ಮೈದಾನದಲ್ಲಿನ ಹೆಲಿಪ್ಯಾಡ್‌ನಿಂದ ಹಾರಾಟ ನಡೆಸಿದ ಹೆಲಿಕಾಪ್ಟರ್‌ನಲ್ಲಿ ಮೊದಲ ಕೆಲ ಸುತ್ತುಗಳನ್ನು ಆಶಾನಿಕೇತನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಹಾರಾಟ ನಡೆಸಿದರು. ಶಾಸಕ ಸತೀಶ ಸೈಲ್ ಪುತ್ರಿ ಪ್ರಾಚಿ ಸೈಲ್ ಈ ಮಕ್ಕಳಿಗೆ ಜೊತೆಯಾದರು.

ಪ್ರತಿ ರೈಡ್‌ನಲ್ಲಿ ಹೆಲಿಕಾಪ್ಟರ್ ಏಳು ನಿಮಿಷ ಹಾರಾಡಲಿದ್ದು,  ಕಾರವಾರ ನಗರದ ಸುತ್ತ ಹಾರಾಟ ನಡೆಸಲಿದೆ.

ADVERTISEMENT

ಚಾಲನೆ ನೀಡುವ ವೇಳೆ ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಪಾಲ್ಗೊಂಡಿದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.