
ಪ್ರಜಾವಾಣಿ ವಾರ್ತೆ
ಕಾರವಾರ: ಇಲ್ಲಿನ ಪಾದ್ರಿಬಾಗದ ಅಮೃತ ಕೊಳಂಬಕರ (38) ಎಂಬುವವರಿಗೆ ಆನ್‌ಲೈನ್ ವ್ಯಾಪಾರದ ಮೂಲಕ ಲಾಭ ಗಳಿಕೆಯ ಆಮಿಷ ತೋರಿಸಿ ₹26.24 ಲಕ್ಷ ವಂಚಿಸಿದ್ದಾಗಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸಾಮಾಜಿಕ ಮಾಧ್ಯಮವೊಂದರಲ್ಲಿ ಮನೆಯಲ್ಲಿ ಕುಳಿತು ಆದಾಯ ಗಳಿಕೆಯ ಜಾಹೀರಾತು ನೋಡಿದ್ದ ಅಮೃತ ಅವರಿಗೆ ಸಣ್ಣಮೊತ್ತದ ಲಾಭವನ್ನು ವಂಚಕರು ನೀಡಿದ್ದರು. ಬೇರೆ ಬೇರೆ ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್ ನೀಡುವ ಕೆಲಸದಿಂದ ಈ ಆದಾಯ ಗಳಿಕೆಯ ದಾರಿ ತೋರಿಸಿದ್ದ ವಂಚಕರು ಹೆಚ್ಚಿನ ಹಣ ಹೂಡಿಕೆ ಮಾಡಿಸಿದ್ದಾಗಿ ಅಮೃತ ದೂರಿದ್ದಾರೆ. ಸೆ.14ರಿಂದ ಡಿ.25ರ ಅವಧಿಯಲ್ಲಿ ಹಂತ ಹಂತವಾಗಿ ₹26.24 ಲಕ್ಷ ಹೂಡಿಕೆ ಮಾಡಿದ ಬಳಿಕ ಹೂಡಿಕೆ ಮಾಡಿಸಿದ್ದವರು ಸಂಪರ್ಕಕ್ಕೆ ಸಿಗದೆ ವಂಚಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.