ADVERTISEMENT

ಅಂಕೋಲಾ: ಎರಡು ಕೆ.ಜಿ ತೂಕದ ಮಾವು!

ಪ್ರಜಾವಾಣಿ ಚಿತ್ರ
Published 15 ಮೇ 2019, 13:15 IST
Last Updated 15 ಮೇ 2019, 13:15 IST
ಎರಡು ಕೆ.ಜಿ.ಯ ಮಾವು!: ‘ಆದಿಮಾವು’ ತಳಿಯ ಈ ಮಾವಿನಕಾಯಿ ಬರೋಬ್ಬರಿ ಎರಡು ಕೆ.ಜಿ. ತೂಕವಿದೆ.
ಎರಡು ಕೆ.ಜಿ.ಯ ಮಾವು!: ‘ಆದಿಮಾವು’ ತಳಿಯ ಈ ಮಾವಿನಕಾಯಿ ಬರೋಬ್ಬರಿ ಎರಡು ಕೆ.ಜಿ. ತೂಕವಿದೆ.    

ಕಾರವಾರ:‘ಆದಿಮಾವು’ ತಳಿಯ ಈ ಮಾವಿನಕಾಯಿ ಬರೋಬ್ಬರಿ ಎರಡು ಕೆ.ಜಿ. ತೂಕವಿದೆ.

ಅಂಕೋಲಾದ ಜಿ.ಆರ್.ಗಾಂವ್ಕರ್ ಅವರ ಮನೆಯಂಗಳದಲ್ಲಿ ಬೆಳೆದಿರುವ ಮಾವಿನಕಾಯಿ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ತಳಿಯ ಗಿಡದಲ್ಲಿ ಕಡಿಮೆ ಕಾಯಿಗಳಿದ್ದರೂ ಬಹುತೇಕ ಎಲ್ಲವೂ ಒಂದೂವರೆ ಕೆ.ಜಿ.ಗಿಂತ ಹೆಚ್ಚು ತೂಕವಿರುತ್ತವೆ. ಗಿಡದಲ್ಲಿ ಬಲಿಯುತ್ತಿದ್ದಂತೆ ಹಣ್ಣಾಗುವ ಮೊದಲೇ ತೊಟ್ಟು ಕಳಚಿ ಬೀಳುತ್ತದೆ. ಇದು ಹುಳಿಯಾಗಿರುವ ಕಾರಣ ಉಪ್ಪಿನಕಾಯಿಗೆ ಹೆಚ್ಚು ಬಳಕೆಯಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.