ADVERTISEMENT

ಕುಮಟಾ: ಹಲವು ಗ್ರಾಮಗಳಿಗೆ ನೆರೆ ನೀರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 15:53 IST
Last Updated 5 ಆಗಸ್ಟ್ 2020, 15:53 IST
ಕುಮಟಾ ತಾಲ್ಲೂಕಿನ ಕತಗಾಲದಲ್ಲಿ ಬುಧವಾರ ಚಂಡಿಕಾ ಹೊಳೆ ಉಕ್ಕಿ ಹರಿದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಮೂರು ಅಡಿಗಳಷ್ಟು ನೀರು ನಿಂತಿತ್ತು
ಕುಮಟಾ ತಾಲ್ಲೂಕಿನ ಕತಗಾಲದಲ್ಲಿ ಬುಧವಾರ ಚಂಡಿಕಾ ಹೊಳೆ ಉಕ್ಕಿ ಹರಿದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಮೂರು ಅಡಿಗಳಷ್ಟು ನೀರು ನಿಂತಿತ್ತು   

ಕುಮಟಾ: ಶಿರಸಿ, ಸಿದ್ದಾಪುರದಲ್ಲಿ ‌ನಿರಂತರವಾಗಿ ಮಳೆಯಾದ ಪರಿಣಾಮ ಅಘನಾಶಿನಿ‌ಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ಕುಮಟಾ ತಾಲ್ಲೂಕಿನ ಹಲವು ‌ಗ್ರಾಮಗಳಿಗೆ ಬುಧವಾರ ನೆರೆ ನೀರು ನುಗ್ಗಿತು.

ಹೆಗಡೆ ಗ್ರಾಮದ ನದಿಯಂಚಿನ ಕೆಲವು‌ ಕುಟುಂಬಗಳು ಮೇಲ್ಭಾಗದ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ನದಿಯಂಚಿನ ದೀವಗಿ, ಮಿರ್ಜಾನ ಗ್ರಾಮಗಳ ಜನವಸತಿ ಪ್ರದೇಶಗಳು ಜಲಾವೃತವಾದವು.

‘ನೀರು ನುಗ್ಗಿದರೆ ತಕ್ಷಣ ಸಮೀಪದ ಪರಿಹಾರ ಕೇಂದ್ರಕ್ಕೆ ಕರೆ ತರಲಾಗುವುದು. ದ್ವೀಪ ಗ್ರಾಮವಾದ ಐಗಳಕುರ್ವೆಯ ಜನರು ಸುರಕ್ಷಿತ ಸ್ಥಳಕ್ಕೆ ಕರೆ ತರಲು ದೋಣಿ ಇಡಲಾಗಿದೆ’ ಎಂದು ಹೆಗಡೆ ಗ್ರಾಮಕ್ಕೆ ಭೇಟಿ‌ ನೀಡಿದ ಶಾಸಕ ದಿನಕರ‌ ಶೆಟ್ಟಿ ತಿಳಿಸಿದರು.

ADVERTISEMENT

ಶಿರಸಿ– ಕುಮಟಾ ನಡುವಿನ ಕತಗಾಲದಲ್ಲಿ ಚಂಡಿಕಾ ಹೊಳೆ ಉಕ್ಕಿ ಹರಿಯಿತು. ಇದರ ಪರಿಣಾಮ ರಾಜ್ಯ ಹೆದ್ದಾರಿಯ ಮೇಲೆ ಸುಮಾರು ಮೂರು ಅಡಿಗಳಷ್ಟು ನೀರು ನಿಂತಿತು. ಅಂದಾಜು ಮೂರು ಗಂಟೆಗಳ ಬಳಿಕ ನೀರು ಇಳಿದು, ವಾಹನ ಸಂಚಾರ ಪುನಃ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.