
ಪ್ರಜಾವಾಣಿ ವಾರ್ತೆ
ಮಾರಿಕಾಂಬಾ ದೇವಿ
ಶಿರಸಿ: ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಫೆ.24ರಿಂದ ರಿಂದ ಮಾ.4ರವರೆಗೆ ಜರುಗಲಿದೆ.
ಭಾನುವಾರ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ಅರ್ಚಕ ಶರಣ ಆಚಾರ್ಯ ಜಾತ್ರೆಯ ದಿನಾಂಕ ಘೋಷಣೆ ಮಾಡಿದರು.
'ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿ–ವಿಧಾನಗಳು ಜ.7ರಿಂದ ಪ್ರಾರಂಭವಾಗಲಿವೆ. ಫೆ.24ರಮನದು ದೇವಿ ಕಲ್ಯಾಣೋತ್ಸವ, ಫೆ.25ರಂದು ರಥೋತ್ಸವ ಜರುಗಲಿದೆ' ಎಂದರು.
ಸಭೆಯಲ್ಲಿ ದೇವಾಲಯದ ಅಧ್ಯಕ್ಷ ರವೀಂದ್ರ ಜಿ. ನಾಯ್ಕ, ಶಾಸಕ ಭೀಮಣ್ಣ ನಾಯ್ಕ, ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.