ADVERTISEMENT

ಕಾರವಾರ | ‘ಗಣೇಶ’ ವಿಸರ್ಜನೆ: ಮುಸ್ಲಿಮರ ಸಾಥ್

ಗಣಪತಿ ಹೆಗಡೆ
Published 15 ಸೆಪ್ಟೆಂಬರ್ 2024, 20:51 IST
Last Updated 15 ಸೆಪ್ಟೆಂಬರ್ 2024, 20:51 IST

ಕಾರವಾರದ ಕೋಣೆವಾಡಾದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಎದುರು ಭಾನುವಾರ ಗಣೇಶೋತ್ಸವ ಆಚರಣೆ ಬಳಿಕ ಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ಯುವ ಮೊದಲು ಹಿಂದೂ, ಮುಸ್ಲಿಂ ಯುವಕರು ಸೇರಿ ಮೂರ್ತಿಯೊಂದಿಗೆ ಫೋಟೊ ತೆಗೆಸಿಕೊಂಡರು

ಕಾರವಾರದ ಕೋಣೆವಾಡಾದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಎದುರು ಭಾನುವಾರ ಗಣೇಶೋತ್ಸವ ಆಚರಣೆ ಬಳಿಕ ಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ಯುವ ಮೊದಲು ಹಿಂದೂ, ಮುಸ್ಲಿಂ ಯುವಕರು ಸೇರಿ ಮೂರ್ತಿಯೊಂದಿಗೆ ಫೋಟೊ ತೆಗೆಸಿಕೊಂಡರು

–ಪ್ರಜಾವಾಣಿ ಚಿತ್ರ

ADVERTISEMENT

ಕಾರವಾರ: ಇಲ್ಲಿನ ಕೋಣೆವಾಡಾದಲ್ಲಿ ಭಾನುವಾರ ನಡೆದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೂರ್ತಿಯನ್ನು ಕೊಂಡೊಯ್ಯಲು ಮುಸ್ಲಿಂ ಯುವಕರು ಹೆಗಲು ನೀಡಿದರು. ‘ಜೈ ಗಣೇಶ’ ಘೋಷಣೆಯನ್ನೂ ಮೊಳಗಿಸಿದರು.

ಸತತ 24 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಗಣೇಶೋತ್ಸವ ಸಮಿತಿಗೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನಜೀರ್ ರಾಣೆಬೆನ್ನೂರ ಅಧ್ಯಕ್ಷರಾಗಿದ್ದರೆ, ಬಾಬು ಶೇಖ್ ಸಂಚಾಲಕರಾಗಿದ್ದಾರೆ. ಹಿಂದೂ–ಮುಸ್ಲಿಂ ಸಮುದಾಯದವರು ಸದಸ್ಯರಾದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ಹಿಂದೂ ಸಮುದಾಯದವರೊಂದಿಗೆ ಮುಸ್ಲಿಂ ಸಮುದಾಯದ ಜನರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯುವ ಮೊದಲು ಮಂಟಪದಿಂದ ತೆರೆದ ವಾಹನದವರೆಗೆ ಹಿಂದೂ, ಮುಸ್ಲಿಂ ಯುವಕರು ಸೇರಿ ಹೆಗಲ ಮೇಲೆ ಹೊತ್ತು ತಂದರು. ಮೆರವಣಿಗೆಯಲ್ಲಿಯೂ ಎರಡೂ ಸಮುದಾಯದವರೂ ಒಟ್ಟಾಗಿ ಪಾಲ್ಗೊಂಡರು. ಸಮೀಪದ ಜಾಮಿಯಾ ಮದೀನಾ ಮಸೀದಿ ಎದುರು  ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಮುಸ್ಲಿಂ ಸಮುದಾಯದವರು ಪಾನಕ, ಸಿಹಿತಿನಿಸು ವಿತರಿಸಿದರು.

ಕೋಣೆವಾಡಾದಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ಜನರು ವಾಸವಿದ್ದು, ಬಹುತೇಕ ಮಂದಿ ಕೂಲಿ, ಸಣ್ಣಪುಟ್ಟ ವ್ಯಾಪಾರ ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ.

‘ಧರ್ಮದ ಭೇದವಿಲ್ಲದೆ 24 ವರ್ಷಗಳಿಂದಲೂ ಗಣೇಶೋತ್ಸವ ದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಸಮಿತಿಗೆ ಮುಸ್ಲಿಂ ಸಮುದಾಯದವರೇ ಅಧ್ಯಕ್ಷರಾಗಿದ್ದಾರೆ. ಈದ್ ಮಿಲಾದ್ ಆಚರಣೆ ಸಮಿತಿಗೆ ಹಿಂದೂ ಸಮುದಾಯದ ನಾಗರಾಜ್ ಬಾಬನಿ ಎಂಬುವವರು ಅಧ್ಯಕ್ಷರಾಗಿದ್ದಾರೆ. ಸೋಮವಾರ ನಡೆಯುವ ಈದ್ ಮಿಲಾದ್‍ನಲ್ಲಿ ಹಿಂದೂ ಸಮುದಾಯದವರೂ ಪಾಲ್ಗೊಳ್ಳುತ್ತಾರೆ’ ಎಂದು ಕೋಣೆವಾಡಾ ಗಣೇಶೋತ್ಸವ ಸಮಿತಿ ಸಂಚಾಲಕ ಬಾಬು ಶೇಖ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.