ADVERTISEMENT

ಗೋಕರ್ಣ ಪರ್ತಗಾಳಿ ಮಠ: ವಿದ್ಯಾಧೀಶ ಶ್ರೀಪಾದ ಸ್ವಾಮೀಜಿ ಪೀಠಾರೋಹಣ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 13:43 IST
Last Updated 31 ಜುಲೈ 2021, 13:43 IST
ಗೋವಾದ ಕಾಣಕೋಣದಲ್ಲಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಪೀಠಾಧಿಪತಿಯಾಗಿ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಶುಕ್ರವಾರ ಪೀಠಾರೋಹಣ ಮಾಡಿದರು. ಚಿತ್ರಕೃಪೆ: ಪರ್ತಗಾಳಿ ಮಠ.
ಗೋವಾದ ಕಾಣಕೋಣದಲ್ಲಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಪೀಠಾಧಿಪತಿಯಾಗಿ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಶುಕ್ರವಾರ ಪೀಠಾರೋಹಣ ಮಾಡಿದರು. ಚಿತ್ರಕೃಪೆ: ಪರ್ತಗಾಳಿ ಮಠ.   

ಕಾರವಾರ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಪೀಠಾಧಿಪತಿಯಾಗಿ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಶುಕ್ರವಾರ ಪೀಠಾರೋಹಣ ಮಾಡಿದರು. ಗೋವಾದ ಕಾಣಕೋಣದ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3.10ಕ್ಕೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಆಸೀನರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೃಂದಾವನಸ್ಥರಾದ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿ ಅವರನ್ನು ಸ್ಮರಿಸಿದರು.

‘ನಮ್ಮ ಗುರುಗಳ ಜ್ಞಾನ ಪ್ರಕಾಶ ಇಲ್ಲಿದೆ. ಅವರು ಶತಾಯುಷಿಗಳಾಗಿ ಇರಬೇಕಿತ್ತು. ಅವರ ಜನಪರವಾದ ಯೋಚನೆ ಮತ್ತು ಯೋಜನೆಗಳಿಂದ ಸಮಾಜಕ್ಕೆ ನೆರವಾಗಿದೆ. ಅಂಥವರು ಗುರುವಾಗಿ ಸಿಕ್ಕಿದ್ದು ಪುಣ್ಯ. ಅವರೊಂದಿಗೆ ಏಳು ವರ್ಷ ಕಳೆದಿದ್ದೇನೆ. ವಯಸ್ಸಿನ ಭೇದವಿಲ್ಲದೇ ಪ್ರತಿ ವಿಚಾರದಲ್ಲೂ ಕಾಳಜಿ ತೋರಿದ್ದಾರೆ. ಅವರು ಕೈಗೊಂಡಿದ್ದ ಸಂಕಲ್ಪಗಳನ್ನು ಪೂರ್ಣಗೊಳಿಸಲು ಕಾರ್ಯ ನಿರ್ವಹಿಸಲಾಗುವುದು. ಅವರ ಮಾರ್ಗದಲ್ಲೇ ಮುಂದುವರಿಯಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ADVERTISEMENT

ಪೀಠಾರೋಹಣ ಮಾಡಿದ ಬಳಿಕ ಮಠದ ಶಾಖಾ ಮಠಗಳಿಂದ ಪಟ್ಟ ಕಾಣಿಕೆ ಸಲ್ಲಿಸಲಾಯಿತು. 23ನೇ ಪೀಠಾಧಿಪತಿಯಾಗಿದ್ದ ವಿದ್ಯಾಧಿರಾಜ ಶ್ರೀಪಾದ ವಡೇರ ಅವರು ಜುಲೈ 19ರಂದು ಹರಿಪಾದ ಸೇರಿದ್ದರು. ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಅವರನ್ನು 2017ರಲ್ಲಿ ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.