
ನಾರ್ವೆಯ ಸ್ಯಾಮ್, ಅರ್ತಿಮಿ
ಗೋಕರ್ಣ: ಇಲ್ಲಿನ ಕುಡ್ಲೆ ಕಡಲತೀರದಲ್ಲಿ ನಾರ್ವೆ ದೇಶದ ಯುವಕ, ಯುವತಿ ಮಂಗಳವಾರ ಗೋಧೂಳಿ ಮುಹೂರ್ತದಲ್ಲಿ ಭಾರತೀಯ ಪದ್ದತಿಯಂತೆ ವಿವಾಹವಾದರು.
ನಾರ್ವೆಯ ಸ್ಯಾಮ್, ಅರ್ತಿಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರೆಸಾರ್ಟ್ ಮಾಲೀಕ ಮುರಳೀಧರ ಕಾಮತ್ ಮದುವೆಯ ಏರ್ಪಾಡನ್ನು ಮಾಡಿದ್ದರು.
ಸ್ಥಳೀಯ ಪುರೋಹಿತರ ಮಂತ್ರ ಪಠಣದೊಂದಿಗೆ ವಧು, ವರರು ಹಾರ ಬದಲಿಸಿಕೊಂಡು, ಧಾರ್ಮಿಕ ಪದ್ಧತಿ ಪೂರೈಸಿದರು.
ವರನ ಕಡೆಯ ಯಜಮಾನನಾಗಿ ರೆಸಾರ್ಟ್ ಮಾಲೀಕ ಮುರಳೀಧರ ಕಾಮತ್ ಮುಂದಾಳತ್ವ ವಹಿಸಿದ್ದರು. ವಧುವಿನ ತಂದೆ ದಾರೆ ಎರೆದು ಹಿಂದೂ ಪದ್ದತಿಯಂತೆ ಮದುವೆ ಶಾಸ್ತ್ರ ಪೂರೈಸಿದರು.
'ಕಳೆದ ವರ್ಷವೇ ಈ ಜೋಡಿ ಮದುವೆಯಾಗಬೇಕೆಂದು ಹೇಳಿದ್ದರು. ಆದರೆ ವೀಸಾ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಈ ವರ್ಷ ಇಬ್ಬರೂ ಬಂದು ಮದುವೆ ಮಾಡಿಸಿಕೊಡುವಂತೆ ಕೋರಿದರು. ಅವರ ಕೋರಿಕೆಯಂತೆ ಹಿಂದೂ ಪದ್ಧತಿಯಂತೆ ಮದುವೆಯ ಎಲ್ಲಾ ಶಾಸ್ತ್ರವನ್ನೂ ಮಾಡಿಸಿದ್ದೇನೆ' ಎಂದು ಮುರಳೀಧರ ಕಾಮತ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.