ADVERTISEMENT

ದಾಂಡೇಲಿ | ಪುನೀತ್‌ ರಾಜಕುಮಾರ ಜನ್ಮದಿನ: ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 13:33 IST
Last Updated 17 ಮಾರ್ಚ್ 2025, 13:33 IST
ಪುನೀತ್‌ ರಾಜಕುಮಾರ ಅವರ ಜನ್ಮದಿನ ನಿಮಿತ್ತ ದಾಂಡೇಲಿಯ ಚನ್ನಮ್ಮ ವೃತ್ತದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು
ಪುನೀತ್‌ ರಾಜಕುಮಾರ ಅವರ ಜನ್ಮದಿನ ನಿಮಿತ್ತ ದಾಂಡೇಲಿಯ ಚನ್ನಮ್ಮ ವೃತ್ತದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು   

ದಾಂಡೇಲಿ: ನಗರದ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪುನೀತ್‌ ರಾಜಕುಮಾರ ಅವರ 50ನೇ ವರ್ಷ ಜನ್ಮದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಪುನೀತ್‌ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜು ಮುಳುಗುಂದ ಮಾತನಾಡಿ, ‘ನಾಲ್ಕು ವರ್ಷಗಳಿಂದ ಪುನೀತ್ ರಾಜಕುಮಾರ್ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಅವರು ಇಲ್ಲದೇ ಚಂದನವನದಲ್ಲಿ ನಗು ಮಾಯವಾಗಿದೆ’ ಎಂದರು.

ಸ್ಥಳೀಯ ಕಲಾವಿದರಿಂದ ಕರೋಕೆ ರಸಮಂಜರಿ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಮಜ್ಜಿಗೆ ವಿತರಣೆ ಕಾರ್ಯಕ್ರಮವು ನಡೆಯಿತು.

ADVERTISEMENT

ಸಂಘದ ಉಪಾಧ್ಯಕ್ಷ ಮುಸ್ತಫಾ ಸನದಿ, ಕಾರ್ಯದರ್ಶಿ ಶಿವಾನಂದ ಕಾಂಬ್ಳೆ , ಖಜಾಂಚಿ ಉದಯಸಿಂಗ ಹಂಚಿನಾಳ, ಸದಸ್ಯರಾದ ಮೋಹನ್, ಸಾಗರ, ವೆಂಕಟೇಶ್ ಅಶೋಕ, ಮುಸ್ತಫಾ, ಕಿರಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.