ADVERTISEMENT

ಯಲ್ಲಾಪುರ: ಮನೆ ಚಾವಣಿ ಕುಸಿದು ವ್ಯಕ್ತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 9:21 IST
Last Updated 18 ಜೂನ್ 2021, 9:21 IST
ಮನೆಯ ಚಾವಣಿ ಕುಸಿದು ಬಿದ್ದಿರುವ ದೃಶ್ಯ
ಮನೆಯ ಚಾವಣಿ ಕುಸಿದು ಬಿದ್ದಿರುವ ದೃಶ್ಯ    

ಯಲ್ಲಾಪುರ: ಪಟ್ಟಣದ ನೂತನ ನಗರ ಜಡ್ಡಿಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಮನೆಯ ಚಾವಣಿ ಕುಸಿದು ಬಿದ್ದು ಮನೆ ಮಾಲಕರಿಗೆ ಗಂಭೀರ ಗಾಯಗಳಾಗಿವೆ.

ಅವಗಡದಿಂದ ಮಹಾಬಲೇಶ್ವರ ಗಾಗು ನಾಯ್ಕ ಎಂಬವರಿಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆ ಚಾವಣಿ ಕುಸಿದಿದ್ದರಿಂದ ಸುಮಾರು 60 ಸಾವಿರ ರೂಪಾಯಿ ಹಾನಿಯಾಗಿರಬಹುದೆಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಾಗೂ ತಾಲ್ಲೂಕು ಆಸ್ಪತ್ರೆಗೆ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಭೇಟಿ ನೀಡಿದ್ದು, ಗಾಯಾಳುವಿಗೆ ಸಾಂತ್ವನ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT