ADVERTISEMENT

18 ಮಂದಿಗೆ ‘ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:44 IST
Last Updated 3 ಜನವರಿ 2026, 7:44 IST
<div class="paragraphs"><p>ಸಾವಿತ್ರಿಬಾಯಿ ಫುಲೆ</p></div>

ಸಾವಿತ್ರಿಬಾಯಿ ಫುಲೆ

   

ಸಿದ್ದಾಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕವು 2025ನೇ ಸಾಲಿನ ‘ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ’ ಪ್ರಶಸ್ತಿಯನ್ನು ಘೋಷಿಸಿದ್ದು, ತಾಲ್ಲೂಕಿನ 18 ಶಿಕ್ಷಕಿಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜ.5ರಂದು ಮಧ್ಯಾಹ್ನ 2.30ಕ್ಕೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಡೆಯುವ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್. ನಾಯ್ಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ ಕೆ.ಎಂ., ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ ಕೆ. ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ನಾಯ್ಕ ಹಾಗೂ ಪ್ರಧಾನಮಂತ್ರಿ ಪೋಷಣಾಶಕ್ತಿ ನಿರ್ಮಾಣ ಯೋಜನೆಯ ಸಹಾಯಕ ನಿರ್ದೇಶಕ ಉದಯ ಮೇಸ್ತ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಸತೀಶ ಆರ್. ಹೆಗಡೆ ಹಾಗೂ ಪ್ರಧಾನ ಕಾರ್ಯದರ್ಶಿ ಗುರುರಾಜ ಕೆ. ನಾಯ್ಕ ತಿಳಿಸಿದ್ದಾರೆ.

ಮಹಿಮಾ ಭಟ್ (ಸ.ಹಿ.ಪ್ರಾ. ಶಾಲೆ ಹುತಗಾರ ), ಸವಿತಾ ಹೆಗಡೆ (ನೇರಗೋಡ), ಮಂಜುಳಾ ಹರಿಕಾಂತ (ಅಂಬೇಗಾರ), ನಾಗರತ್ನ ನಾಯ್ಕ (ಕೋಡಸರ ), ಸೀಮಾ ಮಡಿವಾಳ (ಗಿರಗಡ್ಡೆ), ಸ್ಮಿತಾ ಜೋಶಿ (ತ್ಯಾಗಲಿ), ಗಿರಿಜಾ ದೇವಾಡಿಗ (ಗಾಳಿಜಡ್ಡಿ), ಮಂಗಳಮ್ಮ ಎನ್. (ಗುಡ್ಡೆಕೇರಿ), ಗಂಗಾ ನಾಯ್ಕ (ಕಸ್ತೂರಕಲಕೊಪ್ಪ), ವಿದ್ಯಾ ಭಟ್ಟ (ಬಾಲಿಕೊಪ್ಪ), ಗುಲಾಬಿ ನಾಯ್ಕ (ಬಿಕ್ಕಳಸೆ), ರೇಖಾ ಭಂಡಾರಿ (ವಾಟಗಾರ), ಹೇಮಾವತಿ ನಾಯ್ಕ (ಶಿಬಳಮನೆ), ಗೀತಾಬಾಯಿ ಪಾಲನಕರ (ಬಸವನಬೈಲ್), ಗಿರಿಜಾ ಭಟ್ಟ (ದೊಡ್ಡನೆ), ಸುನಂದಾ ನಾಯ್ಕ (ಹಿತ್ಲಕೊಪ್ಪ), ಅಕ್ಕಮ್ಮ ನಾಯ್ಕ (ಹೊಸಳ್ಳಿ) ಹಾಗೂ ಶ್ರೀಮತಿ ಭಟ್ಟ (ಕಿಲವಳ್ಳಿ) ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.