ಸಿದ್ದಾಪುರ: ‘ಜಾತಿ, ಧರ್ಮ, ಸಂಸ್ಕೃತಿಯಿಂದಾಚೆಗೆ ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಮನಸ್ಸುಗಳನ್ನು ಬೆಸೆಯುತ್ತಿದೆ’ ಎಂದು ಉಪನ್ಯಾಸಕ ಪ್ರಶಾಂತ ಹೆಗಡೆ ಹೇಳಿದರು.
ಪಟ್ಟಣದ ಹಾಳದಕಟ್ಟಾದಲ್ಲಿರುವ ದಿ. ಟಿ.ಕೆ. ಮೆಹಮೂದ್ ಅವರ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸೋಮವಾರ ಆಯೋಜಿಸಿದ್ದ 111ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕನ್ನಡಿಗರ ಮನಸ್ಸಿನಲ್ಲಿರುವ ಭಾವನೆ ಹಂಚಿಕೊಳ್ಳುವುದಕ್ಕೆ ಗಟ್ಟಿಯಾಗಿ ನಿಂತ ಏಕೈಕ ಸಂಘಟನೆ ಕನ್ನಡ ಸಾಹಿತ್ಯ ಪರಿಷತ್’ ಎಂದರು.
ಜಾನಪದ ಕಲಾವಿದೆ ಲೀಲಾವತಿ ಎಸ್ ಕೊಂಡ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ಸಿ.ಎಸ್. ಗೌಡರ್, ನಾಗರಾಜ ನಾಯ್ಕ ಮಾಳ್ಕೋಡು, ಕೆರಿಯಪ್ಪ ನಾಯ್ಕ, ಶಿರೀಷ ಬೇಟಗೇರಿ, ಎಂ.ಕೆ. ನಾಯ್ಕ ಹೊಸಳ್ಳಿ ಮಾತನಾಡಿದರು.
ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಸುರೇಂದ್ರ ದಫೆದಾರ, ಟಿ.ಕೆ.ಎಂ. ಆಜಾದ್, ಸುಲೆಮಾನ್, ಶೇಷಗಿರಿ ಕೊಂಡ್ಲಿ, ಜಿ.ಬಿ. ನಾಯ್ಕ, ಶಂಕರಮೂರ್ತಿ ಕತ್ತಿ, ಗೋಪಾಲ ನಾಯ್ಕ ಭಾಶಿ, ಎಂ.ಎನ್. ನಾಯ್ಕ, ಅಣ್ಣಪ್ಪ ಶಿರಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.