ADVERTISEMENT

ಶಿರಸಿ: ಮಾರಿಕಾಂಬಾ ರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 0:32 IST
Last Updated 25 ಫೆಬ್ರುವರಿ 2026, 0:32 IST
ಮಾರಿಕಾಂಬಾ ದೇವಿ
ಮಾರಿಕಾಂಬಾ ದೇವಿ   

ಶಿರಸಿ: ಎರಡು ವರ್ಷಕ್ಕೊಮ್ಮೆ ಜರುಗುವ ಇಲ್ಲಿನ ಮಾರಿಕಾಂಬಾ ದೇವಿಯ ಮಹಾರಥೋತ್ಸವ ಬುಧವಾರ (ಫೆ.25) ಬೆಳಿಗ್ಗೆ ನಡೆಯಲಿದೆ. ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಹಾವೇರಿ, ಗದಗ ಸೇರಿ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಗೋವಾ, ಮಹಾರಾಷ್ಟ್ರ ರಾಜ್ಯದಿಂದಲೂ ಭಕ್ತರು ದೇವಾಲಯದಲ್ಲಿ ಬೀಡುಬಿಟ್ಟಿದ್ದಾರೆ.

ಫೆಬ್ರುವರಿ 26ರ ನಸುಕಿನ 5ರಿಂದ ಜಾತ್ರಾ ಗದ್ದುಗೆಯಲ್ಲಿ ದೇವಿಗೆ ಹಣ್ಣು–ಕಾಯಿ, ಉಡಿ, ಹರಕೆ ಸೇವೆಗಳು ನಡೆಯಲಿವೆ. ಬೆಳಿಗ್ಗೆ 6 ರಿಂದ ಬೇವಿನ ಉಡುಗೆ ಸೇವೆ ಆರಂಭವಾಗುತ್ತದೆ. ಪ್ರಾಣಿ ಬಲಿ ಇಲ್ಲದಿರುವುದು ವಿಶೇಷ.

ದೇವಿಯ ಪತಿ ಎನ್ನಲಾಗುವ ಪಟ್ಟದ ಕೋಣದ ಹಣೆಗೆ ಎಣ್ಣೆ ಹಾಕಿ, ಅರಿಸಿನ–ಕುಂಕುಮ ಹಚ್ಚಿ ಜನರು ಪೂಜಿಸುತ್ತಾರೆ. ಬೂದುಗುಂಬಳ ಕಾಯಿಯ ಸಾತ್ವಿಕ ಬಲಿ ನೀಡಿದ ಬಳಿಕ, ರಥೋತ್ಸವ ಆರಂಭವಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.