ADVERTISEMENT

ಭಟ್ಕಳ: ಯಶ್ವಸಿಯಾಗಿ ನಡೆದ ಯೋಗ ಶಿಬಿರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:43 IST
Last Updated 2 ಜೂನ್ 2025, 13:43 IST
ಹೆಬಳೆಯ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಯೋಗ ಶಿಬಿರ ಯಶ್ವಸಿಯಾಗಿ ನಡೆಯಿತು
ಹೆಬಳೆಯ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಯೋಗ ಶಿಬಿರ ಯಶ್ವಸಿಯಾಗಿ ನಡೆಯಿತು   

ಭಟ್ಕಳ: ಯೋಗ ಗುರು ಗೋವಿಂದ್ ದೇವಾಡಿಗ ಅವರು ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಹಾನ್ ಸಾಧಕ ಎಂದು ಬೈಲೂರಿನ ಗಣೇಶ್ ಭಟ್ ಹೇಳಿದರು.

ಅವರು ಇತ್ತೀಚಿಗೆ ಹೆಬಳೆಯ ಸಿದ್ದಿ ವಿನಾಯಕ ದೇವಸ್ಥಾನದ ಸಭಾಮಂಟಪದಲ್ಲಿ ಏರ್ಪಡಿಸಿದ್ದ ವಿಶೇಷ ಯೋಗ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಕ ಲಕ್ಷ್ಮಣ ಕೋಟದ ಮಕ್ಕಿ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡ ಅನೇಕರ ಅನುಭವ ಸಮಾಜಕ್ಕೆ ಮಾದರಿಯಾಗಿದೆ. ಅನಾರೋಗ್ಯ ಕಾಡುವ ಪೂರ್ವದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಅತಿ ಮುಖ್ಯ. ಬಿಡುವಿಲ್ಲದ ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಯೋಗಕ್ಕಾಗಿ ಮೀಸಲಿಟ್ಟರೆ ದಿನವೆಲ್ಲವೂ ಯೋಗ ನಿಮ್ಮನ್ನು ಕಾಪಾಡುತ್ತದೆ. ಆರೋಗ್ಯದ ರಕ್ಷಣೆ ಮಾಡುತ್ತದೆ. ನಾನು ಕೂಡ ಅಪಘಾತದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೆ. ಆದರೆ ಯೋಗವನ್ನ ಅಳವಡಿಸಿಕೊಂಡು ನನ್ನ ಆರೋಗ್ಯವನ್ನು ಸುಸ್ಥಿತಿಗೆ ತರಲು ಯಶಸ್ವಿಯಾಗಿದ್ದೇನೆ ಎಂದರು.

ADVERTISEMENT

ಆಯುಷ್ ಆರೋಗ್ಯಧಿಕಾರಿ ಚೇತನ್ ಯೋಗದ ಪ್ರಯೋಜನದ ಕುರಿತು ಮಾತನಾಡಿದರು ಮತ್ತು ನಿಸ್ವಾರ್ಥ ಸೇವೆಯ ಗೋವಿಂದ ಗುರೂಜಿ ಅವರ ಸಾಮಾಜಿಕ ಕಾರ್ಯದ ಕುರಿತು ಶ್ಲಾಘಿಸಿದರು.

ಸಿದ್ಧಿ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ನಾಯ್ಕ, ಹಿರಿಯ ಯೋಗ ಪಟು ಮಂಜುನಾಥ್ ದೈಮನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.