ADVERTISEMENT

‘ರೆಕ್ಕೆ ಬಿಚ್ಚಿದ’ ಟ್ಯಾಗೋರ್ ಕಡಲತೀರ!

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 16:16 IST
Last Updated 19 ಡಿಸೆಂಬರ್ 2020, 16:16 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಕಟ್ಟಡದ ಗೋಡೆಯ ಮೇಲೆ ಕಲಾವಿದ ದೀಪೇಶ ನಾಯ್ಕ ರಚಿಸಿದ ರೆಕ್ಕೆಗಳ ಕಲಾಕೃತಿಯ ಕೆಳಗೆ ನಿಂತು ಯುವಕರು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಕಟ್ಟಡದ ಗೋಡೆಯ ಮೇಲೆ ಕಲಾವಿದ ದೀಪೇಶ ನಾಯ್ಕ ರಚಿಸಿದ ರೆಕ್ಕೆಗಳ ಕಲಾಕೃತಿಯ ಕೆಳಗೆ ನಿಂತು ಯುವಕರು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು   

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಈಗ ‘ರೆಕ್ಕೆ’ ಮೂಡಿದೆ. ಕಲಾವಿದರೊಬ್ಬರ ‍ಪರಿಕಲ್ಪನೆಯ ಈ ಕಲಾಕೃತಿಗೆ ಬಣ್ಣ ಬಣ್ಣದ ಗರಿಗಳಿವೆ.

ನಗರದಲ್ಲಿ ಪರಿಸರ ಸೌಂದರ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಬೆಟರ್ ಕಾರವಾರ’ ಸಮೂಹದಲ್ಲಿರುವ ಕಲಾವಿದ ದೀಪೇಶ ನಾಯ್ಕ ಈ ಚಿತ್ರವನ್ನು ರಚಿಸಿದ್ದಾರೆ. ಈಚೆಗೆ ಚೆನ್ನೈನಲ್ಲಿ ನಡೆದ ‘ಅಖಿಲ ಭಾರತ ಚಿತ್ರಕಲೆ ಸ್ಪರ್ಧೆ 2020’ರಲ್ಲಿ ಅವರು ಈ ಕಲಾಕೃತಿಗೆ ಪ್ರಥಮ ಬಹುಮಾನ ಗಿಟ್ಟಿಸಿಕೊಂಡರು.

ಟ್ಯಾಗೋರ್ ಕಡಲತೀರದ ಹೋಟೆಲ್ ಬಳಿಯ ಗೋಡೆಯಲ್ಲಿ ಈ ಚಿತ್ರವಿದೆ. ‘ಐ ಲವ್ ಕಾರವಾರ’ ಎಂಬ ವಾಕ್ಯದ ಕೆಳಗೆ ನಿಂತು ಸ್ಥಳೀಯರು, ಪ್ರವಾಸಿಗರು ಫೋಟೊ ತೆಗೆದುಕೊಳ್ಳಲು ಅವಕಾಶವಿದೆ. ನಗರಸಭೆ ಮತ್ತು ಕಡಲತೀರಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೆಲಸ ಮಾಡಿದ ತಂಡದಲ್ಲಿ ಸೂರಜ್ ಗೋವೆಕರ್, ಪ್ರಸಾದ್ ಸಾದಿಯೆ, ಅಮನ್ ಶೇಖ್, ನಿತೇಶ್ ನಾಯಕ್ ಉಮಾಶಂಕರ್ ಇದ್ದರು.

ADVERTISEMENT

ಈ ಬಗ್ಗೆ ಮಾತನಾಡಿದ ತಂಡದ ಸದಸ್ಯ ಸೂರಜ್, ‘ನಗರಸೌಂದರ್ಯ ಕುರಿತು ನಾವು ನೋಡುವ ವಿಧಾನವನ್ನು ಸುಧಾರಿಸುವ ಒಂದು ಪ್ರಯತ್ನ ಇದಾಗಿದೆ. ನಾಗರಿಕರ, ಪ್ರವಾಸಿಗರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಂಕೇತವಾಗಿರೆಕ್ಕೆಗಳ ಕಲಾಕೃತಿಯನ್ನು ರಚಿಸಿದ್ದೇವೆ’ ಎಂದರು.

‘ಪ್ರವಾಸಿಗರು ಈ ಕಲಾಕೃತಿಯೊಂದಿಗೆ ನಿಂತು ಫೋಟೊ ತೆಗೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೆ ನಗರದ ಬಗ್ಗೆ ಮತ್ತಷ್ಟು ಪ್ರಚಾರ ಸಾಧ್ಯವಾಗುತ್ತದೆ. ಈ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗುತ್ತದೆ’ ಮತ್ತೊಬ್ಬಸದಸ್ಯ ಪ್ರಸಾದ್ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.