ದಾಂಡೇಲಿ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಂತಹ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ದಾಂಡೇಲಿ ಭಜರಂಗ ದಳ ವತಿಯಿಂದ ಸೋಮಾನಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಗುರುವಾರ ಸಂಜೆ ಭಯೋತ್ಪಾದನಾ ಕೃತ್ಯದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.
ಭಜರಂಗ ದಳದ ಸಂಚಾಲಕ ಚಂದ್ರು ಮಾಳಿ, ರೋಷನ್ ನೇತ್ರವಳಿ, ಈರಯ್ಯ ಪೂಜಾರಿ ಮಾತನಾಡಿ, ಇಂತಹ ಹೇಯ ಕೃತ್ಯವನ್ನು ಪ್ರತಿ ಭಾರತೀಯರು ಖಂಡಿಸುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಯನ್ನು ಹತ್ತಿಕ್ಕಲು ದೇಶದ ಪ್ರಧಾನಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಭಾರತೀಯರು ಒಂದಾಗಿ ಬೆಂಬಲ ನೀಡಬೇಕು. ಈ ಕೃತ್ಯದ ಮಡಿದವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಚಂದ್ರಕಾಂತ ಕ್ಷೀರಸಾಗರ, ಸುಧಾಕರ ರೆಡ್ಡಿ, ರವಿ ಗಾಂವಕರ, ಸಾವಿತ್ರಿ ಬಡಿಗೇರ, ಜಯಶ್ರೀ ನೇಮತಿ, ಗೀತಾ ಶಿಕಾರಿಪುರ, ಹನುಮಂತ ಕಾರಗಿ, ಸಂತೋಷ ಬುಲಬಲೇ, ವಿಷ್ಣು ವಾಜವೇ, ವಿಜಯ ಕೋಲೆಕರ, ಪ್ರಶಾಂತ ಬಸುತೇಕರ ಚನ್ನಬಸಪ್ಪ ಮುರಗೋಡ,ಅಪ್ಪಾರಾವ್, ಲಕ್ಷ್ಮಣ ಜಾಧವ, ಪುನಿತ ನಾಯಕ, ಮಂಜು ಶೆಟ್ಟಿ, ಕಲ್ಪನಾ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.