ADVERTISEMENT

ಮುಂಡಗೋಡ | ಟಿಬೆಟಿಯನ್ ವ್ಯಕ್ತಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 6:02 IST
Last Updated 6 ಸೆಪ್ಟೆಂಬರ್ 2023, 6:02 IST
<div class="paragraphs"><p>ಹತ್ಯೆಯಾದ ಡಾಕ್ಪಾ</p></div>

ಹತ್ಯೆಯಾದ ಡಾಕ್ಪಾ

   

ಮುಂಡಗೋಡ: ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.4ರಲ್ಲಿ ಜಮಯಾಂಗ್ ಡಾಕ್ಪಾ ಯಾನೆ ಲೋಬ್ಸಂಗ್ (35) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಮಂಗಳವಾರ ತಡರಾತ್ರಿ ಜಗಳ ನಡೆದು ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗೊನಪೊ ತಿನ್ಲೆ ಚೊಡೆಕ್(50) ಕೊಲೆ ಮಾಡಿರುವ ಆರೋಪಿಯಾಗಿದ್ದು, ಆತನೂ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

'ಹತ್ಯೆ ಮಾಡಿರುವ ಆರೋಪಿ ಮಾಜಿ ಸೈನಿಕನಾಗಿದ್ದಾನೆ. ಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ತನಿಖೆ ನಡೆಸಲಾಗುತ್ತಿದೆ' ಎಂದು ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.

ಡೊಗುಲಿಂಗ್ ಟಿಬೆಟನ್ ಸೆಟ್ಲಮೆಂಟ್ ಚೇರಮನ್ ಡೊಲ್ಮಾ ಸಿರಿಂಗ್, ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಬಿ.ಎಸ್.ಲೋಕಾಪುರ, ಪಿಎಸ್ಐ ಯಲ್ಲಾಲಿಂಗ ಕುನ್ನೂರ, ಪಿಎಸ್ಐ ಹನಮಂತ ಕುಡಗುಂಟಿ, ಪಿಡಿಒ ಯಂಕಪ್ಪ ಲಮಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.