
ಮುಂಡಗೋಡ: ‘ಗೌತಮ ಬುದ್ಧನು ಭಾರತೀಯನಾಗಿದ್ದು, ಟಿಬೆಟಿಯನ್‌ರು ಬೌದ್ಧ ಧರ್ಮದ ಅನುಯಾಯಿಗಳು ಆಗಿದ್ದೇವೆ. ಈ ಮೂಲಕ ಭಾರತೀಯರ ವಿದ್ಯಾರ್ಥಿಗಳಾಗಿ ನಾವು ಕಲಿಯುತ್ತಿದ್ದೇವೆ’ ಎಂದು ಟಿಬೆಟಿಯನ್ ಧಾರ್ಮಿಕ ನಾಯಕ ದಲೈಲಾಮಾ ಹೇಳಿದರು.
ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.6ರ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದಲ್ಲಿ, ಇಂಡೋ ಟಿಬೆಟಿಯನ್ ಫ್ರೆಂಡಷಿಪ್ ಅಸೋಸಿಯೇಷನ್ ಸದಸ್ಯರು, ಗುರುವಾರ ಭೇಟಿಯಾದ ಸಂದರ್ಭದಲ್ಲಿ ದಲೈಲಾಮಾ ಅವರು, ಭಾರತೀಯರು ಹಾಗೂ ಟಿಬೆಟಿಯನ್‌ರ ನಡುವಿನ ಸಂಬಂಧದ ಕುರಿತು ಕೆಲ ಹೊತ್ತು ಚರ್ಚಿಸಿದರು.
ಅಸೋಸಿಯೇಷನ್ ಹಿರಿಯ ಸದಸ್ಯ ಎನ್.ಡಿ.ಕಿತ್ತೂರ ಅವರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದರು. ಮಲ್ಲಿಕಾರ್ಜುನ ಕಿತ್ತೂರ ಹಾಗೂ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.