ADVERTISEMENT

ಗೋಕರ್ಣ| ಜಲವಿಹಾರಕ್ಕೆ ತೆರಳಿದ ಪ್ರವಾಸಿ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:33 IST
Last Updated 16 ಜನವರಿ 2026, 7:33 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಗೋಕರ್ಣ : ಇಲ್ಲಿಯ ಸಮೀಪದ ತದಡಿಯಿಂದ ಕ್ರ್ಯೂಸರ್ ಮೇಲೆ ಜಲವಿಹಾರಕ್ಕೆ ತೆರಳಿದ ತಮಿಳುನಾಡು ಮೂಲದ ಪ್ರವಾಸಿ ಮಹಿಳೆಯೊಬ್ಬರು, ತದಡಿಯಿಂದ ಅನತಿ ದೂರದಲ್ಲಿ ನೀರಿನಲ್ಲಿ ಈಜಾಡುತ್ತಿರುವಾಗ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ.

ತಮಿಳುನಾಡಿನ ಸತ್ಯಮಂಗಲಂ ಜಿಲ್ಲೆಯ ನಾಗರತಿನ್ (58) ಎಂಬವರೇ ಮೃತಪಟ್ಟ ಮಹಿಳೆಯಾಗಿದ್ದಾರೆ. ಕುಟುಂಬ ಸಮೇತರಾಗಿ ಐದು ಜನ ಗೋಕರ್ಣಕ್ಕೆ ಆಗಮಿಸಿದ್ದು ತದಡಿಯಲ್ಲಿ ದೋಣಿ ವಿಹಾರ ತೆರಳಿದ ವೇಳೆ ಈ ಅವಘಡ ಸಂಬವಿಸಿದೆ, ಖಾಸಗಿ ಅಂಬುಲೆನ್ಸ್ ಮೂಲಕ ಕೂಡಲೇ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರೂ ಪ್ರಯೋಜನವಾಗಿಲ್ಲ. ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

ADVERTISEMENT

ಮಹಿಳೆಯ ಪತಿ, ಮಗಳು ಮತ್ತು ಅಳಿಯ ಅವಘಡ ಸಂಭವಿಸುವಾಗ ಸ್ಥಳದಲ್ಲಿಯೇ ಇದ್ದರು. ಮೃತಪಟ್ಟ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪಿಎಸ್ಐ ಶಶಿಧರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.