ಕಾರವಾರ: ತಾಲ್ಲೂಕಿನ ದೇವಬಾಗ ಕಡಲತೀರದಲ್ಲಿ ಗಾಯಗೊಂಡು ಬಿದ್ದಿದ್ದ ಆಲಿವ್ ರೆಡ್ಲಿ ಕಡಲಾಮೆಗೆ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಸಿಬ್ಬಂದಿ ಚಿಕಿತ್ಸೆ ಒದಗಿಸಿ ಸಮುದ್ರಕ್ಕೆ ಬಿಟ್ಟಿದ್ದಾರೆ.
‘ಕಡಲಾಮೆಯು ಮೀನಿಗೆ ಬೀಸಿದ್ದ ಬಲೆಗೆ ಸಿಲುಕಿಕೊಂಡು ಗಾಯಗೊಂಡಿತ್ತು. ಎಡ ಭಾಗದ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಸ್ಥಿತಿಯಲ್ಲಿತ್ತು. ಸ್ಥಳೀಯ ಮೀನುಗಾರರು ನೀಡಿದ ಮಾಹಿತಿ ಆಧರಿಸಿ ಆಮೆಗೆ ಆರೈಕೆ ಮಾಡಲಾಯಿತು. ಕುಂದಾಪುರದ ರೀಪ್ ವಾಚ್ ಸಂಸ್ಥೆಯ ಸಿಬ್ಬಂದಿ ಕರೆಯಿಸಿ ಆಮೆಗೆ ಚಿಕಿತ್ಸೆ ನೀಡಿ ಸಮುದ್ರಕ್ಕೆ ಬಿಡಲಾಯಿತು’ ಎಂದು ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್‌ಒ ಕಿರಣ್ ಮನವಾಚಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.