ADVERTISEMENT

ಪ್ರತಿಯೊಬ್ಬ ಭಾರತೀಯನನ್ನೂ ಕರೆತರಲು ಕಾರ್ಯಾಚರಣೆ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 7:05 IST
Last Updated 5 ಮಾರ್ಚ್ 2022, 7:05 IST
   

ಕಾರವಾರ: 'ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದವರನ್ನು ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆ ಆರಂಭಿಸಿದ ಮೊದಲ ರಾಷ್ಟ್ರ ಭಾರತ. ಅಲ್ಲಿ ಸಿಲುಕಿರುವ ಕಟ್ಟಕಡೆಯ ಭಾರತೀಯನನ್ನೂ ವಾಪಸ್ ಕರೆತರುವ ಕೆಲಸವನ್ನು ಸರ್ಕಾರಗಳು ಮಾಡಲಿವೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತ‌ನಾಡಿದರು. ಹಾರ್ಕಿವ್‌ನಲ್ಲಿ ಸಿಲುಕಿದ್ದವರಿಗೆ ಭಾರತೀಯ ರಾಯಭಾರಿಗಳು ಸಹಾಯ ಮಾಡಿಲ್ಲ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಉಕ್ರೇನ್ ಯಾವುದೋ ಸಮಾರಂಭದ ಮನೆಯಲ್ಲ, ಯುದ್ಧಪೀಡಿತ ಪ್ರದೇಶ. ಯುದ್ಧನೆಲದಿಂದ ವಾಪಸಾದ ವಿದ್ಯಾರ್ಥಿಯೊಬ್ಬ ಯಾವುದೋ ಪೂರ್ವಗ್ರಹದಿಂದ ಹೇಳಿಕೆ ನೀಡಿದ್ದಾನೆ. ಪಾಕಿಸ್ತಾನದ ವಿದ್ಯಾರ್ಥಿಗಳೂ ಭಾರತದ ತ್ರಿವರ್ಣ ಧ್ವಜ ಹಿಡಿದು ಗಡಿ ದಾಟಿದ್ದಾರೆ. ಹಾಗಾಗಿ, ಯಾವುದೋ‌ ಒಬ್ಬ ವಿದ್ಯಾರ್ಥಿಯ ಹೇಳಿಕೆಯ ಕುರಿತು ನಾನು ಮಾತನಾಡುವುದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT