ADVERTISEMENT

ಹೊಸಪೇಟೆ | ಯುವತಿಯಿಂದ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 10:10 IST
Last Updated 18 ಜನವರಿ 2023, 10:10 IST
ಯುವತಿಯಿಂದ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕಾರ
ಯುವತಿಯಿಂದ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕಾರ   

ಹೊಸಪೇಟೆ (ವಿಜಯನಗರ): ಲೌಕಿಕ ಸುಖ ತ್ಯಜಿಸಿರುವ 20ರ ಹರೆಯದ ಯುವತಿ ವಿಧಿ ಕುಮಾರಿ ಎಂಬುವರು ಬುಧವಾರ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದಿಂದ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಜೈನ ದೀಕ್ಷಾ ಸಮಾರಂಭದಲ್ಲಿ ಆಚಾರ್ಯ ಭಗವಂತ ನರರತ್ನ ಸೂರಿಶ್ವರಜೀ ಮಹಾರಾಜ ಅವರು ವಿಧಿ ಕುಮಾರಿಗೆ ಸನ್ಯಾಸ ದೀಕ್ಷೆ ನೀಡಿದರು. ಮಂಗಳವಾರ ನಗರದಲ್ಲಿ ಕುಮಾರಿ ಶೋಭಾಯಾತ್ರೆ ನಡೆಸಲಾಗಿತ್ತು.

ವಿಧಿ ಕುಮಾರಿ ಅವರು ಎಸ್ಸೆಸ್ಸೆಲ್ಸಿಯಲ್ಲಿ ಶೇ 94.8, ಪಿಯುಸಿಯಲ್ಲಿ ಶೇ 99ರಷ್ಟು ಅಂಕ ಗಳಿಸಿದ್ದಾರೆ. ಇವರು 10 ಮತ್ತು 12ನೇ ವಯಸ್ಸಿನಲ್ಲಿದ್ದಾಗ 48 ದಿನ ಉಪಧ್ಯಾನ ತಪ ಮಾಡಿದ್ದರು. ಕಾಂತಿಲಾಲ್‌ಜೀ ಹಾಗೂ ರೇಖಾದೇವಿ ಜಿರಾವಾಲಾ ದಂಪತಿಯ ಮೂರನೇ ಮಗಳಾದ ಇವರು ಸ್ವಯಂಪ್ರೇರಣೆಯಿಂದ ಧರ್ಮ ಪ್ರಸಾರ ಮಾಡಲು ಸನ್ಯಾನ ಸ್ವೀಕರಿಸದರು.

‘ವಿಧಿ ಕುಮಾರಿ ಅವರು ಸ್ವಂತ ಮನಸ್ಸಿನಿಂದ, ತೆರೆದ ಹೃದಯದಿಂದ ಜೈನ ಧರ್ಮದ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಪ್ರತಿ ವರ್ಷ ಇಡೀ ದೇಶದಲ್ಲಿ 300ಕ್ಕೂ ಹೆಚ್ಚು ಯುವಕ/ಯುವತಿಯರು ಸನ್ಯಾಸ ದೀಕ್ಷೆ ಸ್ವೀಕರಿಸಿ ಧರ್ಮ ಪ್ರಸಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ’ ಎಂದು ನರರತ್ನ ಸೂರಿಶ್ವರಜೀ ಮಹಾರಾಜರು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಶಾಸಕ ಸೋಮಶೇಖರ್‌ ರೆಡ್ಡಿ, ಕಾಂಗ್ರೆಸ್‌ ಮುಖಂಡರಾದ ಎಚ್‌.ಆರ್‌. ಗವಿಯಪ್ಪ, ಮಹಮ್ಮದ್ ಇಮಾಮ್‌ ನಿಯಾಜಿ, ಬಿಜೆಪಿ ಸಿದ್ದಾರ್ಥ ಸಿಂಗ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.