
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 24ನೇ ಕ್ರೆಸ್ಟ್ ಗೇಟ್ ತೆರವು ಕಾರ್ಯ ಶುಕ್ರವಾರ ಆರಂಭವಾಗಿದ್ದು, ಈ ಗೇಟ್‌ನ 10 ಅಡಿ ಭಾಗವನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಲಾಯಿತು. ಈಗಾಗಲೇ 18 ಮತ್ತು 20ನೇ ಗೇಟ್‌ಗಳ 10 ಅಡಿಯಷ್ಟು ಅಗಲದ ಹಲಗೆಯನ್ನು ಕತ್ತರಿಸಿ ತೆಗೆಯಲಾಗಿದೆ.
ಕಾಲುವೆಗಳಿಗೆ ಈಗ 10,972 ಕ್ಯೂಸೆಕ್ ಮತ್ತು ನದಿಗೆ 5,900 ಕ್ಯೂಸೆಕ್ ನೀರು ಹರಿಯುತ್ತಿದೆ. ಈ ಮೂಲಕ ಪ್ರತಿದಿನ 1.8 ಟಿಎಂಸಿ ಅಡಿಯಷ್ಟು ನೀರು ಜಲಾಶಯದಿಂದ ಖಾಲಿಯಾಗುತ್ತಿದೆ. ಸದ್ಯ ಜಲಾಶಯದಲ್ಲಿ 59.85 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಈ ಸಂಗ್ರಹ ಮಟ್ಟ 43 ಟಿಎಂಸಿ ಅಡಿಗೆ ಕುಸಿದ ತಕ್ಷಣ ಹಳೆ ಗೇಟ್‌ಗಳ ಸ್ಥಳದಲ್ಲಿ ಹೊಸ ಗೇಟ್ ಅಳವಡಿಕೆ ಆರಂಭವಾಗಲಿದೆ. ಬಹುತೇಕ ಡಿಸೆಂಬರ್ 20ರ ನಂತರ ಇದಕ್ಕೆ ಚಾಲನೆ ಸಿಗಬಹುದು ಎಂದು ಹೇಳಲಾಗಿದೆ.
ಈಗಾಗಲೇ 15 ಗೇಟ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ 14 ಗೇಟ್‌ಗಳ ತಯಾರಿಗೆ ಸಾಮಗ್ರಿಗಳು ಗದಗ ಮತ್ತು ಇಲ್ಲಿನ ಟಿ.ಬಿ.ಡ್ಯಾಂ ಕಚೇರಿ ಸಮೀಪದ ಕಾರ್ಯಾಗಾರ ಸ್ಥಳಕ್ಕೆ ತಲುಪಿವೆ. ಹೀಗಾಗಿ ಗೇಟ್ ತಯಾರಿ ಕೆಲಸ ವೇಗ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.