ADVERTISEMENT

ಸರ್ಕಾರಿ ಕಚೇರಿಗಳಲ್ಲಿ ರಾಯಣ್ಣ ಭಾವಚಿತ್ರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 9:33 IST
Last Updated 3 ಜುಲೈ 2021, 9:33 IST
ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಜಿಲ್ಲಾ ಸಮಿತಿಯ ಮುಖಂಡರು ಶನಿವಾರ ಹೊಸಪೇಟೆಯಲ್ಲಿ ಗ್ರೇಡ್‌–2 ತಹಶೀಲ್ದಾರ್‌ ಮೇಘಾ ಅವರಿಗೆ ಮನವಿ ಪತ್ರ ಸಲ್ಲಿಸಿದರು
ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಜಿಲ್ಲಾ ಸಮಿತಿಯ ಮುಖಂಡರು ಶನಿವಾರ ಹೊಸಪೇಟೆಯಲ್ಲಿ ಗ್ರೇಡ್‌–2 ತಹಶೀಲ್ದಾರ್‌ ಮೇಘಾ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ, ಕಾಲೇಜುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ಅಳವಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್‌–2 ತಹಶೀಲ್ದಾರ್‌ ಮೇಘಾ ಅವರಿಗೆ ಸಲ್ಲಿಸಿದರು.

ರಾಯಣ್ಣನವರ ಜನ್ಮದಿನ ಹಾಗೂ ಗಲ್ಲಿಗೇರಿಸಿದ ದಿನದಂದು ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಬೇಕು. ಈ ಕುರಿತು ಸರ್ಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಸೇನೆ ಜಿಲ್ಲಾ ಅಧ್ಯಕ್ಷ ದಾಸನಾಳ್ ಹನುಮಂತಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್‌. ಮಹೇಶ್‌, ಉಪಾಧ್ಯಕ್ಷರಾದ ಎನ್.ನಾಗರಾಜ, ಕೆ.ರವಿಕುಮಾರ್, ಮುಖಂಡರಾದ ಬಂದಿ ಸ್ವಾಮಿ, ಬಂದಿ ಭರ್ಮಪ್ಪ, ಬಿ.ಬಲ್ಲೂರೇಶ್, ಬಿಸಾಟಿ ತಾಯಪ್ಪ, ಬಂದಿ ಭರ್ಮೆಶ್, ಬಿ.ಜಂಬಯ್ಯ, ಕೆ. ಶ್ರಿಧರ್, ಡೊಮ್ಮಿ ವೆಂಕಟೇಶ್, ಹುಲುಗಪ್ಪ, ಕೆ.ರಾಘವೇಂದ್ರ, ಶ್ರೀ ಕೃಷ್ಣದೇವರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.