ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ಫೆ. 7ರಿಂದ 11ರ ವರೆಗೆ ವಾರ್ಷಿಕ ದೂರಶಿಕ್ಷಣ ಕೋರ್ಸ್‌ಗಳ ಪರೀಕ್ಷೆ ನಡೆಸಲು ನಿರ್ಧರಿಸಿದೆ.
2019–20ನೇ ಸಾಲಿನ ಎಂ.ಎ. ಪ್ರಥಮ ವರ್ಷ, ಸ್ನಾತಕೋತ್ತರ ಡಿಪ್ಲೊಮಾ/ಡಿಪ್ಲೊಮಾ ಕೋರ್ಸ್‌ಗಳ ವಾರ್ಷಿಕ ಪರೀಕ್ಷೆಗಳನ್ನು ಜ. 27ರಿಂದ 31ರ ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್ ಮೂರನೇ ಅಲೆಯಿಂದ ಮುಂದೂಡಲಾಗಿತ್ತು. ಈಗ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.