ಹೊಸಪೇಟೆ (ವಿಜಯನಗರ): ಖಾಕಿ ತೊಟ್ಟ ಮೇಲೆ ಪೊಲೀಸ್ - ಹೋಂ ಗಾರ್ಡ್ ಬೇಧ ಭಾವ ಬೇಡ, ಗೃಹರಕ್ಷಕರು ಪೊಲೀಸ್ ಇಲಾಖೆಗೆ ಬೆನ್ನೆಲುಬಾಗಿ ನಿಷ್ಕಾಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.ಹೇಳಿದರು.
ಸೋಮವಾರ ಇಲ್ಲಿ ಜಿಲ್ಲಾಮಟ್ಟದ ಗೃಹರಕ್ಷಕ ದಳದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೃಹರಕ್ಷಕರು ನಮ್ಮ ಇಲಾಖೆಗೆ ಹೆಗಲಿಗೆ ಹೆಗಲು ಕೊಟ್ಟು ಪ್ರಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುತ್ತಾರೆ ಎಂದರು.
ಉಪವಿಭಾಗಾಧಿಕಾರಿ ಪಿ.ವಿವೇಕಾನಂದ ಮಾತನಾಡಿ, ಪೊಲೀಸರಿಗೆ ಹೋಲಿಸಿದರೆ ಗೃಹರಕ್ಷಕರಿಗೆ ಯಾವುದೇ ಸೌಲಭ್ಯ ಇಲ್ಲ, ಆದರೂ ನಿಮ್ಮ ನಿಸ್ವಾರ್ಥ ಸೇವೆಯು ಮೆಚ್ಚುವಂಥದ್ದು ಎಂದರು.
ಜಿಲ್ಲಾ ಬೋಧಕರಾದ ಪ್ರಶಾಂತ್ ಪಾಟೀಲ್ ಮಾತನಾಡಿ, ಹಬ್ಬ ಹರಿ- ದಿನ ಚುನಾವಣೆ ಬಂದೋಬಸ್ತ್ ಕರ್ತವ್ಯದಲ್ಲಿ ಹಾಗೂ ಇನ್ನಿತರ ಸಂದರ್ಭದಲ್ಲಿ ಗೃಹರಕ್ಷಕರ ಸೇವೆ ಶ್ಲಾಘನೀಯ ಎಂದರು ಹಾಗೂ ವಾರ್ಷಿಕ ವರದಿ ಓದಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾದೇಷ್ಟ ಬಸವರಾಜ ಮಾತನಾಡಿ, ಆರೋಗ್ಯ ಇಲಾಖೆಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಲು ಗೃಹರಕ್ಷಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೆ ಮಂಜೂರಾತಿ ಕೋರುತ್ತೇನೆ ಎಂದರು.
ಗೃಹರಕ್ಷಕ ದಳ ಇಲಾಖೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳಾದ ಶಂಕರ್ ರಾವ್ ಹಾಗೂ ನಾಗರಾಜ್ ಮಲ್ಕಿ ಒಡೆಯರ್ ಅವರನ್ನು ಸನ್ಮಾನಿಸಲಾಯಿತು.
ಘಟಕಾಧಿಕಾರಿ ಗಿರೀಶ್ ಎಸ್.ಎಂ., ಎಲ್.ವಲ್ಯ ನಾಯ್ಕ್, ಬಿ.ಪರಶುರಾಮ್, ನರಿ ಮಲ್ಲಿಕಾರ್ಜುನ, ಶಂಕರ್ ನಾಯ್ಕ್, ಗುರುಬಸವರಾಜ್ , ಜೆ.ಎಂ.ಬಾಷಾ , ನರಿ ವಿರೂಪಾಕ್ಷಿ , ಅನ್ವರ್ ಭಾಷಾ , ಮಲ್ಲಿಕಾರ್ಜುನ ಸ್ವಾಮಿ, ಪೂಜಾರ್ ವಾಗೇಶ್ , ಉದಯ ಚಂದ್ರ ಎಂ , ಸಂತೋಷ್ ಸಿ.ಇತರರು ಇದ್ದರು.
ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ
ಜಿಲ್ಲಾ ಅತ್ಯುತ್ತಮ ಘಟಕಾಧಿಕಾರಿ ರಾಜ್ ಪೀರ್ ಅತ್ಯುತ್ತಮ ಘಟಕ ಹಗರಿಬೊಮ್ಮನಹಳ್ಳಿ ಅತ್ಯುತ್ತಮ ಗೃಹರಕ್ಷಕ ಪಿ ಭಾಷಾ ಸಾಹೇಬ್ ಬಿ.ಚಂದ್ರಪ್ಪ ಅತ್ಯುತ್ತಮ ಗೃಹರಕ್ಷಕಿ ಹಸೀನಬಾನು ಪ್ರಶಸ್ತಿಗಳನ್ನು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.