ಹೂವಿನಹಡಗಲಿ ತುಂಗಭದ್ರಾ ಪ್ರೌಢಶಾಲೆಯಲ್ಲಿ ಜೆಸಿಐ ಸಂಸ್ಥೆ ಆಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಡಾ. ಕೆ.ನಿಖಿಲ್ ಮಾತನಾಡಿದರು.
ಹೂವಿನಹಡಗಲಿ: ‘ಯುವ ಜನರು ಮಾದಕ ದ್ರವ್ಯಗಳ ಸೇವನೆಯ ಗೀಳು ಅಂಟಿಸಿಕೊಳ್ಳಬಾರದು’ ಎಂದು ತಜ್ಞವೈದ್ಯ ಡಾ. ಕೆ.ನಿಖಿಲ್ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ಜೆಸಿಐ ಹೂವಿನಹಡಗಲಿ ರಾಯಲ್ ಹಮ್ಮಿಕೊಂಡಿದ್ದ ಮಕ್ಕಳು ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆರೋಗ್ಯವಂತ ಮಕ್ಕಳು ದೇಶದ ಆಸ್ತಿ. ಯುವಕರು ಡ್ರಗ್ಸ್ ದಾಸರಾಗುತ್ತಿರುವುದು ಕಳವಳಕಾರಿಯಾಗಿದೆ. ಮಕ್ಕಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಡಾ. ಜೆ.ಡಿ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಪಿ.ಎಂ.ಗೀತಾ ಮಾತನಾಡಿದರು.
ಜೇಸಿ ಸಂಸ್ಥೆಯ ವಿನಾಯಕ ಕೋಡಿಹಳ್ಳಿ, ರಫೀನಾ ಬೇಗಂ, ವಾರದ ನಿಯಾಜ್, ಡಾ. ಪ್ರಕಾಶ ಅಟವಾಳಗಿ, ಎಸ್.ದ್ವಾರಕೀಶ ರೆಡ್ಡಿ, ಡಾ. ಎಂ.ಕೆ.ಸೋಮಶೇಖರ್, ಎಸ್.ಮಹಾಂತೇಶ, ಕೆ.ನಾಗರಾಜ, ಶಿವರಾಜ್, ಭರತಕುಮಾರ್, ಪುನೀತ್, ಶಿಕ್ಷಕರಾದ ಕೆ.ಬಸವರಾಜ, ಜಿ.ಆನಂದ, ಗಿಡ್ಡಾನಾಯ್ಕ, ಪ್ರತಿಮಾ ಜಯಮ್ಮ, ಸಂಗಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.