
ಹೊಸಪೇಟೆ (ವಿಜಯನಗರ): ಈ ಬಾರಿಯ ಹಂಪಿ ಉತ್ಸವ ಫೆಬ್ರುವರಿ 13ರಿಂದ 15ರವರೆಗೆ ನಡೆಯಲಿದೆ ಎಂದು ಬುಧವಾರ ಇಲ್ಲಿ ಪ್ರಕಟಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಲಾಂಛನ ಬಿಡುಗಡೆ ಮಾಡಿದರು.
13ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವ ಉದ್ಘಾಟಿಸಲಿದ್ದಾರೆ. ಉತ್ಸವಕ್ಕೆ ₹22 ಕೋಟಿ ಅನುದಾನ ಕೇಳಿದ್ದೇವೆ. ಮುಂದೆ ನವೆಂಬರ್ ತಿಂಗಳಲ್ಲೇ ಉತ್ಸವ ನಡೆಸುವ ಬಗ್ಗೆ ಪ್ರಯತ್ನ ನಡೆಯಲಿದೆ ಎಂದು ಸಚಿವರು ಬಳಿಕ ತಿಳಿಸಿದರು.
ಕೊಟ್ಟೂರು ರಥೋತ್ಸವ ಫೆ.12ರಂದು ಇದ್ದರೂ, ಹಂಪಿ ಉತ್ಸವದ ಭದ್ರತೆಗೆ ಯಾವ ತೊಂದರೆಯೂ ಆಗದ ಹಾಗೆ ಬದಲಿ ವ್ಯವಸ್ಥೆ ಮಾಡಲಾಗುವುದು, ಉತ್ಸವವನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ ಎಂದರು.
ಸಂಸದ ಇ.ತುಕಾರಾಂ, ಶಾಸಕರಾಧ ಲತಾ ಮಲ್ಲಿಕಾರ್ಜುನ, ಜೆ.ಎನ್.ಗಣೇಶ್, ಭರತ್ ರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.