
ಹಂಪಿ ಉತ್ಸವ ಪ್ರಯುಕ್ತ ಹೆಲಿಕಾಪ್ಟರ್ ಯಾನ ಗುರುವಾರ ಆರಂಭವಾಗಿದ್ದು, ಆನೆಲಾಯ ಪ್ರದೇಶ ಆಗಸದಿಂದ ಹೀಗೆ ಕಾಣಿಸಿತು
ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ (ವಿಜಯನಗರ): ಶುಕ್ರವಾರದಿಂದ ಆರಂಭವಾಗುವ ಹಂಪಿ ಉತ್ಸವಕ್ಕೆ ವಿಶ್ವ ಪಾರಂಪರಿಕ ತಾಣ ಸಜ್ಜಾಗಿದೆ. ಮೂರು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕಲಾವಿದರು ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು.
ಹಂಪಿಯನ್ನು ಆಗಸದಿಂದ ನೋಡುವುದಕ್ಕೆ ಅವಕಾಶ ಕಲ್ಪಿಸುವ ಹೆಲಿಕಾಪ್ಟರ್ ಯಾನ (ಹಂಪಿ ಬೈ ಸ್ಕೈ) ಗುರುವಾರದಿಂದ ಆರಂಭವಾಗಿದೆ. ‘ವಸಂತ ವೈಭವ’ ಕಲಾ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
‘ತುಂಗಾರತಿಯನ್ನು ಹಲವು ವಿದೇಶಿ ಪ್ರವಾಸಿಗರು ನೋಡಿ ಖುಷಿಪಟ್ಟರು. ಹಂಪಿಯನ್ನು ಆಗಸದಿಂದ ನೋಡುವ ಅವಕಾಶವೂ ಸಿಕ್ಕಿದೆ. ಹಂಪಿ ಉತ್ಸವ ನಮ್ಮ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಸಫಲವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಜನರನ್ನು ಸೆಳೆಯುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಫಲಪುಷ್ಪ ಪ್ರದರ್ಶನ, ಆಹಾರ, ಮತ್ಸ್ಯ ಮೇಳ, ಕುಸ್ತಿ ಸಹಿತ ಹಲವು ಸಾಹಸ ಕ್ರೀಡೆಗಳ ಜತೆಗೆ ಹಂಪಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಗೋಷ್ಠಿ ಹಾಗೂ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹಂಪಿ ಉತ್ಸವ ಪ್ರಯುಕ್ತ ಹೆಲಿಕಾಪ್ಟರ್ ಯಾನ ಗುರುವಾರ ಆರಂಭವಾಗಿದ್ದುಕಲ್ಲುಬಂಡೆಗಳ ನಡುವೆ ವಿರೂಪಾಕ್ಷ ದೇವಸ್ಥಾನದ ಗೋಪುರ ಕಾಣಿಸಿದ್ದು ಹೀಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.