ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಅಂಗವಾಗಿ ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ. ಪುಷ್ಪಲೋಕದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪತಿ ಪ್ರಮುಖ ಆಕರ್ಷಣೆ ಎನಿಸಿವೆ.
ಬಿಳಿ, ಕೆಂಪು, ನೇರಳೆ, ಹಳದಿ ಬಣ್ಣದ ಸೇವಂತಿ, ಗುಲಾಬಿ, ಚಂಡು ಹೂಗಳಿಂದ ಬಡವಿ ಶಿವಲಿಂಗ ಹಾಗೂ ಸಾಸಿವೆ ಕಾಳು ಗಣಪ ನಿರ್ಮಿಸಲಾಗಿದೆ. ಬಡವಿ ಶಿವಲಿಂಗ ನಿರ್ಮಾಣಕ್ಕೆ 10 ಸಾವಿರ ಹಾಗೂ ಸಾಸಿವೆ ಕಾಳು ಗಣಪತಿ ನಿರ್ಮಾಣಕ್ಕೆ 5 ಸಾವಿರ ಹೂಗಳು ಬಳಕೆಯಾಗಿವೆ. ಎರಡೂ ಕಲಾಕೃತಿಗಳು ಹೊಸಪೇಟೆ ಕಲಾವಿದ ಜಗದೀಶ್ ಕೈಚಳದಲ್ಲಿ ಮೂಡಿಬಂದಿದೆ.
ಇದರೊಂದಿಗೆ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ ನೆನಪಿಸುವ ಮುತ್ತು, ವಜ್ರ, ವೈಢೂರ್ಯ, ಸ್ವರ್ಣಗಳ ಮಾರಾಟ ರಾಜಬೀದಿ ನಾಡಿನ ಗತವೈಭವ ಸಾರುತ್ತಿವೆ. ಹೂಗಳಿಂದ ನಿರ್ಮಿತವಾದ ರಾಯರರಾಯ, ಯವನರಾಜ್ಯಪ್ರತಿಷ್ಠಾಪನಾಚಾರ್ಯ ಕೃಷ್ಣದೇವರಾಯರ ಪ್ರತಿಮೆ ಗಾಂಭೀರ್ಯ ಮೆಚ್ಚುವಂತಿದೆ. ಸಿರಿಧಾನ್ಯಗಳಲ್ಲಿ ಮೂಡಿಬಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವಿನೀತಳಾಗಿ ಕೈಮುಗಿದು ನಿಂತ ಪ್ರತಿಮೆ, ಪರಿಸರ ರಕ್ಷಣೆ ನೋಡುಗರನ್ನು ಸೆಳೆಯುತ್ತಿದೆ. ಕುಬ್ಜಮರಗಳ ಬೆಳಸುವ ಬೋನ್ಸಾಯ್ ಕಲೆ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ಪರಿಚಯ ಪಲಫುಷ್ಪ ಪ್ರದರ್ಶನ ದೊರೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.