ADVERTISEMENT

ಕುಸಿದು ಬಿತ್ತು ಐತಿಹಾಸಿಕ ಹಂಪಿ ಕೋಟೆಯ ಗೋಡೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 5:46 IST
Last Updated 12 ಮಾರ್ಚ್ 2021, 5:46 IST
ಹಂಪಿ ಕಮಲ ಮಹಲ್‌ ಸ್ಮಾರಕ ಸುತ್ತಲಿನ ಕೋಟೆ
ಹಂಪಿ ಕಮಲ ಮಹಲ್‌ ಸ್ಮಾರಕ ಸುತ್ತಲಿನ ಕೋಟೆ    

ವಿಜಯನಗರ (ಹೊಸಪೇಟೆ): ತಾಲ್ಲೂಕಿನ ಹಂಪಿ ಕಮಲ ಮಹಲ್‌ ಸ್ಮಾರಕ ಸುತ್ತಲಿನ ಕೋಟೆ ಗೋಡೆಯ ಒಂದು ಭಾಗ ಶುಕ್ರವಾರ ಬೆಳಿಗ್ಗೆ ಕುಸಿದು ಬಿದ್ದಿದೆ.

ಕಲ್ಲುಗಳಿಂದ ನಿರ್ಮಿಸಿದ್ದ ಗೋಡೆಯ ಒಂದು ಭಾಗ ಭಾಗಶಃ ಕುಸಿದಿದೆ. ಪುರಾತನ ಗೋಡೆಯಾಗಿರುವುದರಿಂದ ಕುಸಿದು ಬಿದ್ದಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಯಾವುದೇ ಸ್ಮಾರಕಕ್ಕೆ ಹಾನಿಯಾಗಿಲ್ಲ.

ಘಟನೆ ಜರುಗಿದಾಗ ಯಾರೊಬ್ಬರೂ ಅಲ್ಲಿ ಇರಲಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ಪ್ರಜಾವಾಣಿಗೆ ತಿಳಿಸಿದ್ದಾರೆ.

ADVERTISEMENT

ಕುಸಿದು ಬಿದ್ದ ಗೋಡೆ ಬಗ್ಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ. ಈ ಹಿಂದಿನಂತೆ ಮರು‌ನಿರ್ಮಾಣಕ್ಕೆ‌ ಪ್ರಸ್ತಾವ ಕಳಿಸಿ, ಒಪ್ಪಿಗೆ ಪಡೆಯಲಾಗುವುದು ಎಂದು ಕಾಳಿಮುತ್ತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.