ADVERTISEMENT

ಹೊಸಪೇಟೆಯಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 12:52 IST
Last Updated 13 ಆಗಸ್ಟ್ 2021, 12:52 IST
ಹೊಸಪೇಟೆ ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ನೆನೆದುಕೊಂಡೇ ರಸ್ತೆ ದಾಟಿದ ವಿದ್ಯಾರ್ಥಿಗಳು– ಪ್ರಜಾವಾಣಿ ಚಿತ್ರ
ಹೊಸಪೇಟೆ ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ನೆನೆದುಕೊಂಡೇ ರಸ್ತೆ ದಾಟಿದ ವಿದ್ಯಾರ್ಥಿಗಳು– ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ಬಿರುಸಿನ ಮಳೆಯಾಗಿದೆ.

ಮಧ್ಯಾಹ್ನ ಮೂರುವರೆಯಿಂದ ಸಂಜೆ 5.30ರ ವರೆಗೆ ಎಡೆಬಿಡದೆ ಬಿರುಸಾಗಿ ಮಳೆ ಸುರಿದಿದೆ. ಬೆಳಿಗ್ಗೆಯಿಂದ ಕಾರ್ಮೋಡ ಕವಿದಿತ್ತು. ಮಧ್ಯಾಹ್ನ ಆರಂಭಗೊಂಡ ಜಿಟಿಜಿಟಿ ಮಳೆ ನಂತರ ಬಿರುಸಾಗಿ ಸುರಿಯಿತು.

ಜೋರು ಮಳೆಗೆ ನಗರದ ಹಂಪಿ ರಸ್ತೆಯಲ್ಲಿನ ಚರಂಡಿಗಳು ಉಕ್ಕಿ ಹರಿದಿವೆ. ಇದರ ಪರಿಣಾಮ ರಸ್ತೆಯ ಮೇಲೆ ಹೊಲಸು ನೀರು ಹರಿಯಿತು. ವಾಹನ ಸವಾರರ ಪರದಾಟ ನಡೆಸಿದರು. ನೀರಿನ ಪ್ರಮಾಣ ತಗ್ಗುವವರೆಗೆ ವಾಹನ ಸಂಚಾರಕ್ಕೆ ತೊಡಕಾಯಿತು.

ತಾಲ್ಲೂಕಿನ ನಾಗೇನಹಳ್ಳಿ, ಹೊಸೂರು, ಧರ್ಮದಗುಡ್ಡ, ಬಸವನದುರ್ಗ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.
ನಾಲ್ಕು ದಿನಗಳಿಂದ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮೋಡ ಕವಿದಿರುತ್ತದೆ. ಮಧ್ಯಾಹ್ನದಿಂದ ಸಂಜೆಯ ವರೆಗೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಸತತ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT