
ಕೂಡ್ಲಿಗಿ (ವಿಜಯನಗರ ಜಿಲ್ಲೆ): ಕೂಡ್ಲಿಗಿ ಕ್ಷೇತ್ರದ 74 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಲೋಕಾರ್ಪಣೆ ಸೇರಿದಂತೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮ ನ.9ರಂದು ನಡೆಯಲಿದ್ದು, ಪಟ್ಟಣ ನವ ವಧುವಿನಂತೆ ಸಿಂಗರಿಸಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 12ಕ್ಕೂ ಹೆಚ್ಚು ಸಚಿವರು ಪಟ್ಟಣಕ್ಕೆ ಬರುವ ಹಿನ್ನಲೆಯಲ್ಲಿ ಪಟ್ಟಣದ ರಸ್ತೆಗಳಿಗೆ ಡಾಂಬರೀಕರಣ, ತಗ್ಗು ಮುಚ್ಚುವುದು, ಬಿಳಿ ಪಟ್ಟಿ ಹಾಕುವುದು ಹಾಗೂ ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯುವುದು ಸೇರಿದಂತೆ ವಿವಿಧ ಸಿದ್ದತೆಗಳು ಬರದಿಂದ ಸಾಗಿವೆ.
ಕಾರ್ಯಕ್ರಮದ ಅಂಗವಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರ ಜನಸಂಪರ್ಕ ಕಚೇರಿ ಬಳಿ ಬೃಹತ್ ಪೆಂಡಾಲ್ ಹಾಕುವ ಕಾರ್ಯ ಕೊನೆಯ ಹಂತಕ್ಕೆ ಬಂದಿದೆ. 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಹೊಂದಿದ್ದು, ವೇದಿಕೆಯ ಕಾರ್ಯಕ್ರಮ ಎಲ್ಲರಿಗೂ ಕಾಣುವಂತೆ ಎಲ್‍ಇಡಿ ವಾಲ್ ಗಳನ್ನು ಅಳವಡಿಸಲಾಗಿದೆ.
ಗಣ್ಯರು ಬಂದಿಳಿಯಲು ವೇದಿಕೆಯ ಹಿಂಭಾಗದಲ್ಲಿನ ಚೋರನೂರು ರಸ್ತೆಯ ಪಕ್ಕದಲ್ಲಿ ಎರಡು ಹೆಲಿಪ್ಯಾಡಗಳನ್ನು ನಿರ್ಮಿಸಿದ್ದು, ಜನರನ್ನು ಕರೆ ತರುವ ವಾಹನಗಳನ್ನು ನಿಲ್ಲಿಸಲು ಮಹಾದೇವ ಮೈಲಾರ ಕ್ರೀಡಾಂಗಣ ಹಾಗೂ ಗುಡೇಕೋಟೆ ರಸ್ತೆಯ ಅಕ್ಕ ಪಕ್ಕದಲ್ಲಿನ ಹೊಲಗಳನ್ನು ಸಮತಟ್ಟು ಮಾಡಿ ಸಿದ್ದಪಡಿಸಲಾಗಿದೆ. ಗುಡೇಕೋಟೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಿದ್ದು, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ಅಕ್ಕ ಪಕ್ಕದಲ್ಲಿ ಜೆಸಿಬಿಗಳನ್ನು ಬಳಸಿಕೊಂಡು ಗಿಡಗಂಟಿಗಳನ್ನು ಕಿತ್ತು ಸ್ವಚ್ಚ ಮಾಡಲಾಗುತ್ತಿದೆ.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಪಾದಚಾರಿ ಮಾರ್ಗ ಕಲ್ಪಿಸಲು, ಸಿಮೆಂಟಿನ ಸ್ಲ್ಯಾಬ್‌ಗಳನ್ನು ಹಾಕಿ ಸುವ್ಯವಸ್ಥಿತಗೊಳಿಸುತ್ತಿದ್ದಾರೆ. ಕಾಮಗಾರಿ ಕೆಲವೆಡೆ ನಿಧಾನಗತಿಯಲ್ಲಿ ಸಾಗುತ್ತಿವೆ. ರಸ್ತೆಗಳ ಪಕ್ಕದ ಚರಂಡಿಗಳು ಸ್ವಚ್ಛತೆ ಕಾಣದೆ ಎಷ್ಟೋ ವರ್ಷಗಳಾಗಿದ್ದವು, ಈಗ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿವೆ ಹಾಗೂ ಚರಂಡಿಗಳು ಸ್ವಚ್ಛವಾಗಿವೆ. ಬೀದಿ ದೀಪಗಳು ಬೆಳಕು ಕಂಡಿವೆ. ಒಟ್ಟಾರೆ ಇಡೀ ಪಟ್ಟಣ ನವ ವಧುವಿನಂತೆ ಸಿಂಗಾರಗೊಳ್ಳುತ್ತಲಿದೆ. ಮುಖ್ಯಮಂತ್ರಿ ಸೇರಿದಂತೆ ಗಣ್ಯರನ್ನು ಸ್ವಾಗತಿಸುವ ಪ್ಲೆಕ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ಮುಖ್ಯಮಂತ್ರಿ ಬರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿರುವುದು ಜನರಲ್ಲಿ ಸಮದಾನ ಮೂಡಿಸಿದೆ.
‘ಕ್ಷೇತ್ರದ ಜನರ ಬಹುದಿನಗಳ ಮಹತ್ವಾಕಾಂಕ್ಷೆಯ ಯೋಜನೆ ಸಾಕರಗೊಳ್ಳುತ್ತಿರುವುದರಿಂದ ಎಲ್ಲರಲ್ಲೂ ಸಂತಸ ಮೂಡಿದೆ. ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.