
ಹೊಸಪೇಟೆ: ಚಂದ್ರಗ್ರಹಣ ನಿಮಿತ್ತ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಾಗುತ್ತದೆ, ಗ್ರಹಣ ಮುಕ್ತಾಯಗೊಂಡ ಬಳಿಕ ದೇವಸ್ಥಾನಗಳಲ್ಲಿ ಶುದ್ಧೀಕರಣ ನಡೆದು ಪುನಃ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ, ಜಂಬುನಾಥ ಗುಡ್ಡದ ಜಂಬುನಾಥೇಶ್ವರ ದೇವಸ್ಥಾನ, ವಡಕರಾಯ, ಹೊಸೂರಮ್ಮ ಸಹಿತ ಎಲ್ಲಾ ದೇವಸ್ಥಾನಗಳಲ್ಲಿ ಈ ಪದ್ಧತಿ ಜಾರಿಯಲ್ಲಿರಲಿದೆ. ವಡಕರಾಯ ದೇವಸ್ಥಾನದ ನವಗ್ರಹಗಳಲ್ಲಿ ಮಾತ್ರ ಗ್ರಹಣ ಅವಧಿಯಲ್ಲೇ ವಿಶೇಷ ಪೂಜೆ ನಡೆಯಲಿದೆ, ಹೀಗಾಗಿ ಪ್ರತ್ಯೇಕ ಪ್ರವೇಶ ದ್ವಾರದ ವ್ಯವಸ್ಥೆ ಮಾಡಲಾಗಿದೆ.
‘ಗ್ರಹಣ ಅವಧಿಯಲ್ಲಿ ಇತರ ಎಲ್ಲ ದೇವಸ್ಥಾನಗಳು ಬಂದ್ ಆಗಿರುತ್ತವೆ. ಆದರೆ ವಡಕರಾಯ ದೇವಸ್ಥಾನದ ನವಗ್ರಹ ಪೂಜಾ ಸ್ಥಳದಲ್ಲಿ ಸಂಜೆ 4.30ರಿಂದ ವಿಶೇಷ ಪೂಜೆ, ಸಂಕಲ್ಪ, ದಾನಾದಿ ಕಾರ್ಯಗಳು ನಡೆಯಲಿವೆ’ ಎಂದು ಅರ್ಚಕ ಅನಿಲ್ ಜೋಶಿ ತಿಳಿಸಿದರು.
ನಾಳೆ ಹೋಳಿ: ಸೋಮವಾರ ರಾತ್ರಿ ಕಾಮದಹನ ನಡೆಯಲಿದೆ, ಮಂಗಳವಾರ ಎಲ್ಲೆಡೆ ಹೋಳಿ ಆಚರಣೆ ನಡೆಯಲಿದೆ. ಈ ಬಾರಿ ಸಹ ಜಿಲ್ಲಾ ಕ್ರೀಡಾಂಗಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಳಿ ಆಚರಣೆಗೆ ಸಿದ್ಧತೆಗಳು ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.