ADVERTISEMENT

ಮಾದಿಗರ ವಿಶ್ವಾಸ ಕಳೆದುಕೊಂಡ ಸರ್ಕಾರ: ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 2:48 IST
Last Updated 22 ಜುಲೈ 2025, 2:48 IST
ಎ.ನಾರಾಯಣಸ್ವಾಮಿ
ಎ.ನಾರಾಯಣಸ್ವಾಮಿ   

ಹೊಸಪೇಟೆ (ವಿಜಯನಗರ): ‘ಹಿಂದುಳಿದ ವರ್ಗದವರ ಚಾಂಪಿಯನ್’ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗರ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅದರ ‍ಪರಿಣಾಮವನ್ನು ಅವರು ಮುಂದೆ ಎದುರಿಸಬೇಕಾಗುತ್ತದೆ’ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಳಮೀಸಲಾತಿಗಾಗಿ ಹೋರಾಡಿದ್ದು ಮಾದಿಗರು ಮತ್ತು ಅದರ ಉಪಪಂಗಡದವರು ಮಾತ್ರ. ನಿಜವಾಗಿಯೂ ಹೆಚ್ಚು ಅನ್ಯಾಯವಾಗಿರುವ ಕಾರಣಕ್ಕೇ ನಾವು ಹೋರಾಡಿದ್ದೇವೆ. ಇನ್ನಷ್ಟು ವಿಳಂಬ ತಂತ್ರವನ್ನು ಸಹಿಸಲು ಸಾಧ್ಯವಿಲ್ಲ ಎಂದರು.

‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಐದು ವರ್ಷವಾಗುತ್ತ ಬಂತು. ಮೀಸಲಾತಿ ನೆಪವೇ ಇದಕ್ಕೆ ಕಾರಣ. ನೀವು ಏನು ಬೇಕಾದರೂ ಮಾಡಿಕೊಳ್ಳಿ, ಮಾದಿಗರಿಗೆ ತಕ್ಷಣ ಶೇ 6ರಷ್ಟು ಒಳಮೀಸಲಾತಿ ಕೊಡಿ, ಈ ಮೀಸಲಾತಿ ದೊರೆತರೆ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವೂ ಉಚಿತವಾಗಿ ಲಭಿಸುವಂತಾಗುತ್ತದೆ’ ಎಂದರು.

ADVERTISEMENT

ಮುಖಂಡರಾದ ಎಂ.ಸಿ.ವೀರಸ್ವಾಮಿ, ಬಲ್ಲಾಹುಣ್ಸಿ ರಾಮಣ್ಣ, ಶೇಷು, ಸಿ.ಆರ್.ಭರತ್‌ಕುಮಾರ್, ಪೂಜಪ್ಪ, ಮಂಜುನಾಥ, ಬಸವರಾಜ, ಎಸ್‌.ಸೆಲ್ವಂ, ಶ್ರೀನಿವಾಸ, ಶೇಕ್ಷಾವಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.